ಸೀತಾಫಲ ಹಣ್ಣು ತಿನ್ನಲು ಎಷ್ಟು ರುಚಿಕರವೋ; ಆರೋಗ್ಯಕ್ಕೂ ಅಷ್ಟೇ ಉಪಯೋಗಕಾರಿ

WhatsApp
Telegram
Facebook
Twitter
LinkedIn

ನಮ್ಮ ಸುತ್ತ – ಮುತ್ತ ಬೆಳೆಯುವ ಹಣ್ಣಿನಿಂದ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹಾಗಿರುವಾಗ ಸೀತಾಫಲ ಹಣ್ಣು ಆರೋಗ್ಯಕ್ಕೆ ಎಷ್ಟು ಉತ್ತಮ? ತಿನ್ನಲೂ ಸಿಹಿಯಾಗಿರುವ ಜೊತೆಗೆ ಮಕ್ಕಳಿಂದ ವಯಸ್ಕರವರೆಗೆ ಇಷ್ಟವಾಗುವ ಸೀತಾಫಲ ಹಣ್ಣಿನಲ್ಲಿ ಆರೋಗ್ಯ ಪ್ರಯೋಜನಗಳೆಷ್ಟಿವೆ ಎಂಬುದನ್ನು ತಿಳಿದುಕೊಳ್ಳಿ. ಮನೆಯಲ್ಲೇ ಬೆಳೆದ ಸೀತಾಫಲ ಹಣ್ಣು ಸೇವಿಸುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಿ. ಸೀತಾಫಲ ಹಣ್ಣು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ವಿಟಮಿನ್ ಸಿ ಯಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ನಿಮ್ಮ ದೇಹದಲ್ಲಿ ಸ್ವತಂತ್ರ ರಾಡಿಕಲ್ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಪೊಟ್ಯಾಶಿಯಮ್ ಮತ್ತು ಮೆಗ್ನೀಶಿಯಮ್ ಕೂಡಾ ಅಧಿಕವಾಗಿದ್ದು ಹೃದಯ ಆರೋಗ್ಯವನ್ನು ಸುಧಾರಿಸುತ್ತದೆ. ಸೀತಾಫಲದ ಆರೋಗ್ಯ ಪ್ರಯೋಜನಗಳುಸೀತಾಫಲದಲ್ಲಿ ವಿಟಮಿನ್ ಎ ಅಂಶವಿರುತ್ತದೆ. ಇದು ನಿಮ್ಮ ತ್ವಚೆ ಮತ್ತು ಕೂದಲನ್ನು ಆರೋಗ್ಯವಾಗಿರಿಸುತ್ತದೆ. ಈ ಹಣ್ಣು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ. ಈ ಹಣ್ಣನ್ನು ಸೇವಿಸುವುದರಿಂದ ಕಬ್ಬಿಣಾಂಶವನ್ನು ಪಡೆದುಕೊಳ್ಳಬಹುದು. ಇದು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅತಿಸಾರ, ಬೇಧಿ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಸೀತಾಫಲದಲ್ಲಿ ಮೆಗ್ನೀಶಿಯಮ್ ಅಂಶವಿದೆ. ಇದು ದೌರ್ಬಲ್ಯದಿಂದ ಆರೋಗ್ಯವನ್ನು ಸುಧಾರಿಸುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರಿಗೂ ಇದು ಪ್ರಯೋಜನಕಾರಿಯಾಗಿದೆ. ಈ ಹಣ್ಣಿನಲ್ಲಿ ವಿಟಮಿನ್ ಬಿ6 ಅಂಶವಿದೆ. ಈ ಹಣ್ಣಿನಿಂದ ಸಿಗುವ ಸಾಕಷ್ಟು ಪೋಷಕಾಂಶಗಳಿಂದ ಮಾನಸಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು. ಜೊತೆಗೆ ಖಿನ್ನತೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೀತಾಫಲವು ಕ್ಯಾಟೆಚಿನ್​ಗಳು, ಎಪಿಕಾಟಿನ್​ಗಳು ಮತ್ತು ಎಪಿಗಲ್ಲೊಕಾಟೆಚಿನ್​ಗಳಂಥಹ ಅಂಶಗಳನ್ನು ಒಳಗೊಂಡಿದೆ. ಇವುಗಳಲ್ಲಿ ಕೆಲವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುವ ಸಾಮರ್ಥ್ಯ ಹೊಂದಿವೆ. ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಈ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸೀತಾಫಲವು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon