ಸ್ವತಂತ್ರ ಲಿಂಗಾಯತ ಧರ್ಮದ ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ, ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.
https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.
ವಚನ: :
ರಕ್ಕಸಿ ಮಗುವ ಹೆತ್ತು, ಕರುಳ ನೇಣ ಮಾಡಿ,
ಹೆಣೆದ ತೊಟ್ಟಿಲ ಕಟ್ಟಿ, ರಕ್ತದ ಪಾಲನೆರೆದು,
ಮತ್ತ ಜೀವವ, ಜಗವನೊತ್ತಿ ತಿಂಬವನೆ,
ರಕ್ಕಸಿಯ ಹೊತ್ತು ಹೋಗದವನೆಯೆಂದು ತೊಟ್ಟಿಲ ಹಿಡಿದು ತೂಗೆ,
ಬಾಯ ಮುಚ್ಚಿ ಕಣ್ಣಿನಲ್ಲಿ ಅಳುತ್ತಿದ್ದಿತ್ತು,ಬಂಕೇಶ್ವರಲಿಂಗವ ನೋಡಿಹೆನೆಂದು.
-ಸುಂಕದ ಬಂಕಣ್ಣ