ಸ್ವತಂತ್ರ ಲಿಂಗಾಯತ ಧರ್ಮದ ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ, ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.
https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.
ವಚನ: :
ದಬ್ಬಳ ಧರೆಯ ಚುಚ್ಚಲಾರದೆ,
ಹಾಗ ಮುಳ್ಳು ಮೂರುಲೋಕವ ಚುಚ್ಚಿತ್ತು.
ರಟ್ಟೆ ಬಲಿದ ಹಕ್ಕಿ ಹಾರಲಾರದೆ,
ಆ ಕೊಂಬಿಂದ ಈ ಕೊಂಬಿನಲ್ಲಿ ಉಳಿಯಿತ್ತು.
ತುಪ್ಪುಳ ಬಾರದ ಮರಿ ಮಹದಾಕಾಶವ ಸುತ್ತಿತ್ತು.
ಹೆತ್ತವಳರಿಯದ ಮದ, ಆಗ ಹುಟ್ಟಿದ ಶಿಶು ಅರಿಯಿತ್ತು.ತಮ್ಮವ್ವೆಗೆ ಮದ್ದ ಕೊಟ್ಟು, ತಾ ಸತ್ತಿತ್ತು, ಬಂಕೇಶ್ವರಲಿಂಗದಲ್ಲಿ.
-ಸುಂಕದ ಬಂಕಣ್ಣ