ನವದೆಹಲಿ: ಸುಕನ್ಯಾ ಸಮೃದ್ಧಿ ಸೇರಿದಂತೆ 2 ಪ್ರಮುಖ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು 2023-24ನೇ ಆರ್ಥಿಕ ವರ್ಷದ ಕೊನೆಯ ತ್ತೈಮಾಸಿಕದ ಅವಧಿಗೆ ಕೇಂದ್ರ ಸರ ಕಾರ ಪರಿಷ್ಕರಿಸಿದ್ದು, ಬಡ್ಡಿದರವನ್ನು ಹೆಚ್ಚಳಗೊಳಿಸಿದೆ.
ತ್ರೈಮಾಸಿಕದ ಅವಧಿಗೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು 0.20% ತನಕ ಏರಿಸಲಾಗಿದೆ. ಸುಕನ್ಯಾ ಸಮೃದ್ಧಿ ಮತ್ತು 3 ವರ್ಷಗಳ ಅವಧಿಯ ಪೋಸ್ಟ್ ಆಫೀಸ್ ಬಡ್ಡಿ ದರಗಳನ್ನು ಏರಿಸಲಾಗಿದೆ.
ಹಣಕಾಸು ಸಚಿವಾಲಯವು 2023ರ ಡಿಸೆಂಬರ್ 29ರಂದು ಈ ಬಗ್ಗೆ ಪ್ರಕಟಣೆ ಹೊರಡಿಸಿದೆ. ಉಳಿದಂತೆ ಎಲ್ಲ ಉಳಿತಾಯ ಯೋಜನೆಗಳ (ಪಬ್ಲಿಕ್ ಪ್ರಾವಿಡೆಂಟ್ ಫಂಡ್- ಪಿಪಿಎಫ್, ಕಿಸಾನ್ ವಿಕಾಸ್ ಪತ್ನ, ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸೇರಿದಂತೆ) ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. .ಅದರ ಬಡ್ಡಿ ದರ 7.1% ರ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.