ಸುನೀತಾಗೆ ಡಾಕ್ಟರೇಟ್ ಪದವಿ
ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಸುನಿತಾ ಕೆ.ಬಿ ಇವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.
ಕರ್ನಾಟಕ ವಿಶ್ವವಿದ್ಯಾನಿಲಯದ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. (ಶ್ರೀಮತಿ) ಎ .ಎನ್. ತಾಮ್ರಗುಂಡಿ, ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “Role of Lead Bank in Financial Inclusion – A Study of Davanagere District” ಎಂಬ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಲಾಗಿದೆ.
ಶ್ರೀಮತಿ ಸುನಿತಾ ಕೆ.ಬಿ. ಇವರು ದಿ. ಶ್ರೀ ಕೆ. ಬಸಪ್ಪ ದಿ. ಶ್ರೀಮತಿ ಕೆ .ಬಿ .ರತ್ನಮ್ಮ ಇವರ ಪುತ್ರಿ ಹಾಗೂ ದಾವಣಗೆರೆ ವಾಸಿ ಶ್ರೀ ಕೆ.ಎಂ. ಜಯಪ್ಪ ರೈಲ್ವೆ ಇಲಾಖೆ ಇವರ ಪತ್ನಿ.