ನವದೆಹಲಿ:ಸುಪ್ರೀಂ ಕೋರ್ಟ್ ಆವರಣದಲ್ಲಿ “ಮಿಟ್ಟಿ ಕೆಫೆ” ಎಂಬ ವಿಶಿಷ್ಟ ಕೆಫೆಗೆ ಇಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಚಾಲನೆ ನೀಡಿದರು.
ನೂತನವಾಗಿ ನಿರ್ಮಿಸಲಾದ ಕೆಫೆಯನ್ನು ಸಂಪೂರ್ಣವಾಗಿ ವಿಶೇಷ ಸಾಮರ್ಥ್ಯವುಳ್ಳ ಸಿಬ್ಬಂದಿಗಳು ನಿರ್ವಹಿಸುತ್ತಾರೆ. ಕೆಫೆಯ ವ್ಯವಸ್ಥಾಪಕರು ದೃಷ್ಟಿಹೀನರಾಗಿದ್ದು, ಸಿಬ್ಬಂದಿಗಳು ಸೆಲೆಬ್ರಲ್ ಪಾಲ್ಸಿ,ಪಾರ್ಶ್ವವಾಯು ಹೊಂದಿರುವ ವಿಶೇಷ ಚೇತನರಾಗಿದ್ದಾರೆ.
ಈ ಕೆಫೆಯ ಉದ್ಘಾಟನೆ ವೇಳೆ ರಾಷ್ಟ್ರಗೀತೆಯನ್ನು ಸಂಜ್ಞಾ ಭಾಷೆಯ ಮೂಲಕ ಹಾಡಿರುವುದು ಮತ್ತೊಂದು ವಿಶೇಷವಾಗಿತ್ತು.
ಸ್ವತಃ ಇಬ್ಬರು ವಿಕಲಚೇತನ ಮಕ್ಕಳನ್ನು ದತ್ತು ಪಡೆದು ಸಾಕುತ್ತಿರುವ ಸಿಜೆಐ ಚಂದ್ರಚೂಡ್ ಅವರು, ವಿಶೇಷ ಅಗತ್ಯವುಳ್ಳ ಜನರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಮಾತನಾಡಿದ ಸಿಜೆಐ, ವಕೀಲರು ಹಾಗೂ ಸುಪ್ರೀ ಕೋರ್ಟ್ ಸಿಬ್ಬಂದಿಗಳೆಲರೂ ಕೇಫೆಗೆ ಭೇಟಿ ನೀಡುವ ಮೂಲಕ ವಿಶೇಷ ಸಾಮರ್ಥವುಳ್ಳವರಿಗೆ ಹೆಚ್ಚು ಉತ್ತೇಜನ ನೀಡಲು ಕರೆ ನೀಡಿದರು.
ಸೋಶಿಯಲ್ ಇನಿಶಿಯೇಟಿವ್ ಫೌಂಡೇಶನ್ ಆಗಿರುವ ಮಿಟ್ಟಿ ಕೆಫೆ ಒಂದು NGO ಆಗಿದ್ದು, 2017 ರಲ್ಲಿ ಸ್ಥಾಪನೆಯಾಗಿದ್ದುಇದು ವಿಶೇಷ ಅಗತ್ಯವುಳ್ಳ ಜನರಿಗೆ ಉದ್ಯೋಗವಕಾಶವನ್ನು ನೀಡುತ್ತದೆ.