ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರು ತಮ್ಮ ಪ್ರಚಾರ ವ್ಯವಸ್ಥಾಪಕಿ ಸೂಸನ್ ವೈಲ್ಸ್, ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥೆಯಾಗಲಿದ್ದಾರೆ ಎಂದು ಘೋಷಿಸಿದ್ದಾರೆ.
ಅಮೆರಿಕದ ಇತಿಹಾಸದಲ್ಲೇ ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥೆಯಾಗಲಿರುವ ಮೊದಲ ಮಹಿಳೆ ಎನಿಸಲಿದ್ದು, ಸೂಸನ್‌ಗೆ ಅರ್ಹ ಗೌರವ ಸಿಗಲಿದೆ. ಆಕೆ ನಮ್ಮ ದೇಶವನ್ನು ಹೆಮ್ಮೆಪಡುವಂತೆ ಮಾಡಲಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದು ಟ್ರಂಪ್ ತಿಳಿಸಿದ್ದಾರೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಯಶಸ್ವಿ ಅಭಿಯಾನದಲ್ಲಿ ಸೂಸನ್ ಗಮನಾರ್ಹ ಪಾತ್ರ ವಹಿಸಿದ್ದರು. 2016 ಹಾಗೂ 2020ರ ಅಭಿಯಾನಗಳಲ್ಲೂ ಅವರು ಅವಿಭಾಜ್ಯ ಅಂಗವಾಗಿದ್ದರು’ ಎಂದು ಟ್ರಂಪ್ ಉಲ್ಲೇಖಿಸಿದ್ದಾರೆ. ಅಮೆರಿಕದ ಉಪಾಧ್ಯಕ್ಷರಾಗಿ ಚುನಾಯಿತರಾಗಿರುವ ಜೆ.ಡಿ. ವ್ಯಾನ್ಸ್ ಸಹ ಸೂಸನ್ ವೈಲ್ಸ್ ಅವರನ್ನು ಅಭಿನಂದಿಸಿದ್ದಾರೆ.


































