ಚಿತ್ರದುರ್ಗ: ಕರ್ನಾಟಕ ರಾಜ್ಯದಾದ್ಯಂತ 2025ರ ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 5ರವರೆಗೆ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಚಿತ್ರದುರ್ಗದಲ್ಲಿ ದಿನಾಂಕ 16 -9 -2025 ರಂದು ನಡೆಯುವ ಅಭಿಯಾನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕಾರ್ಯಕಾರಿ ಸಮಿತಿಯನ್ನು ನೇಮಕಮಾಡಲಾಯಿತು.
ಭಾನುವಾರ ಚಿತ್ರದುರ್ಗದ ಶ್ರೀ ಮುರುಘಾಮಠದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಜಿಲ್ಲೆಯ ಪ್ರಮುಖ ಮಠಾಧೀಶರು, ಬಸವತತ್ವಾಭಿಮಾನಿಗಳು, ಕಲಾವಿದರು ಸಾಹಿತಿಗಳು, ಕವಿಗಳು, ಜನಪ್ರತಿನಿಧಿಗಳು, ರೈತರು, ಮಹಿಳಾಪರ ಸಂಘಟನೆಯ ಪ್ರತಿನಿಧಿಗಳು,ವಿವಿಧ ಸಮಾಜದವರು, ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಪ್ರಮುಖರು, ಮತ್ತಿತರರು ಭಾಗವಹಿಸಿ ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿಗೆ ಕಾರಣರಾಗಬೇಕೆಂದು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.
ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರ ನೇತೃತ್ವದಲ್ಲಿ , ಚಿತ್ರದುರ್ಗ ಬೃಹನ್ಮಠದ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಮಹಾಸ್ವಾಮಿಗಳವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕಾರ್ಯಕಾರಿ ಸಮಿತಿ ನೇಮಕ ಮಾಡಲಾಯಿತು.ಸಮಾಜದ ಹಿರಿಯರಾದ ಹನುಮಲಿ ಶ್ರೀಷಣ್ಮುಖಪ್ಪ ಅವರನ್ನ ಅಧ್ಯಕ್ಷರನ್ನಾಗಿ,ಶಾಸಕರಾದ ಶ್ರೀ ಕೆ.ಸಿ.ವೀರೇಂದ್ರ ಅವರನ್ನ ಗೌರವ ಕಾರ್ಯದರ್ಶಿಯಾಗಿ, ವಿಧಾನ ಪರಿಷತ್ ಸದಸ್ಯರಾದ ಶ್ರೀಕೆ.ಎಸ್.ನವೀನ್ ಹಾಗೂ ಶ್ರೀ ಜಿ.ಎಂ. ಅನಿತ್ ಅವರನ್ನ ಗೌರವ ಉಪಾಧ್ಯಕ್ಷರುಗಳನ್ನಾಗಿ ಹಾಗೂ ಬಾಪೂಜಿ ವಿದ್ಯಾಸಂಸ್ಥೆಯ ಶ್ರೀ ಕೆ.ಎಂ.ವೀರೇಶ್ ಅವರನ್ನ ಖಜಾಂಚಿಯಾಗಿ ನೇಮಕ ಮಾಡಲಾಗಿದೆ.