ಮುಂಬೈ ಲೋಕಮಾನ್ಯ ತಿಲಕ್ – ಮಂಗಳೂರು ಜಂಕ್ಷನ್ ರೈಲಿಗೆ ವಿಶೇಷ ರೈಲುಗಳಿಗೆ ತಾತ್ಕಾಲಿಕವಾಗಿ 3 ಸ್ಲೀಪರ್ ಕ್ಲಾಸ್ ಕೋಚ್ ಗಳು ಮತ್ತು ಒಂದು ಜನರಲ್ ಸೆಕೆಂಡ್ ಕ್ಲಾಸ್ ಸಿಟ್ಟಿಂಗ್ ಕೋಚ್ ಗಳನ್ನು ಪ್ರಯಾಣಿಕರ ಒತ್ತಡವನ್ನು ಕಡಿಮೆಗೊಳಿಸುವ ಸಲುವಾಗಿ ಈ ಸೇವೆಯನ್ನು ಒದಗಿಸಲಾಗುವುದು ಎಂದು ರೈಲ್ವೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
2023ರ ಸೆ. 29 ಮತ್ತು 30ರಂದು ಮುಂಬೈ ಲೋಕಮಾನ್ಯ ತಿಲಕ್ನಿಂದ ಹೊರಡುವ ರೈಲು (ನಂಬ್ರ 01165) ಮುಂಬೈ ಲೋಕಮಾನ್ಯ ತಿಲಕ್ – ಮಂಗಳೂರು ಜಂಕ್ಷನ್ ವಿಶೇಷ ರೈಲಿಗೆ 3 ಸ್ಲೀಪರ್ ಕ್ಲಾಸ್ ಕೋಚ್ ಗಳು ಮತ್ತು ಒಂದು ಸಾಮಾನ್ಯ ಎರಡನೆ ದರ್ಜೆಯ ಸಿಟ್ಟಿಂಗ್ ಕೋಚ್ ಗಳನ್ನುಸೇರ್ಪಡೆಗೊಳಿಸಲಾಗುವುದು.
ಸೆ.30 ಮತ್ತು ಅ.1ರಂದು ಮಂಗಳೂರು ಜಂಕ್ಷನ್ನಿಂದ ಹೊರಡಲಿರುವ ಮಂಗಳೂರು ಜಂಕ್ಷನ್ – ಮುಂಬೈ ಲೋಕಮಾನ್ಯ ತಿಲಕ್ ವಿಶೇಷ ರೈಲಿಗೆ – (ನಂಬ್ರ 01161) 3 ಸ್ಲೀಪರ್ ಕ್ಲಾಸ್ ಕೋಚ್ಗಳು ಮತ್ತು ಒಂದು ಸಾಮಾನ್ಯ ಎರಡನೇ ದರ್ಜೆಯ ಸಿಟ್ಟಿಂಗ್ ಕೋಚ್ ಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.