ಬೀಜಿಂಗ್ : ದಕ್ಷಿಣ ಚೀನಾದ ಗುವಾಂಗ್ಝಾವ್ ನಗರದಲ್ಲಿ ನದಿಯ ಸೇತುವೆಗೆ ಸರಕು ನೌಕೆಯೊಂದು ಡಿಕ್ಕಿಯಾದ ಪರಿಣಾಮ ಸೇತುವೆಯ ಒಂದು ಭಾಗ ಕುಸಿದು ಬಿದ್ದಿದೆ.
ಆಗ ಸೇತುವೆಯಲ್ಲಿ ಸಾಗುತ್ತಿದ್ದ ಬಸ್ ಸಹಿತ 5 ವಾಹನಗಳು ನದಿಗೆ ಉರುಳಿ ಬಿದ್ದಿದ್ದು ಇಬ್ಬರು ಮೃತಪಟ್ಟಿದ್ದಾರೆ. ಇತರ ಮೂವರು ನಾಪತ್ತೆಯಾಗಿದ್ದಾರೆ. ಫೊಷಾನ್ನಿಂದ ಹೊರಟಿದ್ದ ಸರಕು ನೌಕೆ ಗುವಾಂಗ್ಝಾವ್ ನಗರದತ್ತ ಪ್ರಯಾಣಿಸುತ್ತಿತ್ತು.
ಪರ್ಲ್ ನದಿಯ ಲಿಕ್ಸಿನ್ಷಾ ಸೇತುವೆಗೆ ಡಿಕ್ಕಿಯಾಗಿದ್ದು ಮುರಿದ ಸೇತುವೆಯ ಕಂಬಗಳಡಿ ನೌಕೆ ಸಿಲುಕಿಕೊಂಡಿದೆ. ಆಗ ಸೇತುವೆಯಲ್ಲಿ ಸಾಗುತ್ತಿದ್ದ ಒಂದು ಬಸ್ ಸಹಿತ 5 ವಾಹನಗಳು ನದಿಗೆ ಉರುಳಿ ಇಬ್ಬರು ಸಾವನ್ನಪ್ಪಿದ್ದು ಇತರ ಮೂವರು ನಾಪತ್ತೆಯಾಗಿದ್ದಾರೆ. ಹಡಗಿನ ಕ್ಯಾಪ್ಟನ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.