ಬೇಕಾದ ಪದಾರ್ಥಗಳು
ಚಿಕನ್
ಜೋಳದ ಹಿಟ್ಟು
ಮೈದಾ
ಅಕ್ಕಿ ಹಿಟ್ಟು
ಎಣ್ಣೆ
ಮೊಟ್ಟೆ
ಮೊಸರು
ಕಸ್ತೂರಿ ಮೇಥಿ
ಪೇಸ್ಟ್ ಮಾಡಲು ಬೇಕಾದ ಪದಾರ್ಥಗಳು
ಶುಂಠಿ
ಚಕ್ಕೆ
ಲವಂಗ
ಕರಿಬೇವು
ಹಸಿಮೆಣಸು
ಮಾಡುವ ವಿಧಾನ
-ಪಾತ್ರೆಗೆ ಅಕ್ಕಿಹಿಟ್ಟು, ಜೋಳದ ಹಿಟ್ಟು, ಮೈದಾ ಹಿಟ್ಟು, ಅಕ್ಕಿ ಹಿಟ್ಟು, ಕಡಲೇಹಿಟ್ಟು, ಕಸ್ತೂರಿ ಮೇಥಿ, ಎಣ್ಣೆ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು.
-ನಂತರ ಶುಂಠಿ, ಚಕ್ಕೆ, ಕರಿಬೇವು, ಕರಿಮೆಣಸು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು.
-ನಂತರ ರುಬ್ಬಿದ ಮಸಾಲೆ ಹಾಗೂ ಮಿಕ್ಸ್ ಮಾಡಿಕೊಂಡ ಮಸಾಲೆಯನ್ನು ಮಿಕ್ಸ್ ಮಾಡಿ ಒಂದು ಮೊಟ್ಟೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
-ಈಗಾಗಲೇ ತಯಾರಿಸಿದ ಮಿಶ್ರಣಕ್ಕೆ ಚಿಕನ್ ಹಾಕಿ ರುಬ್ಬಿದ ಮಸಾಲೆ, ಉಪ್ಪು, ಅರಿಶಿನ ಹಾಕಿ ಮಿಶ್ರಣ ಮಾಡಿ ಅರ್ಧ ಗಂಟೆ ಹಾಗೆಯೇ ಇಟ್ಟುಕೊಳ್ಳಬೇಕು.
-ಈಗ ಕಾದ ಎಣ್ಣೆಗೆ ಹಾಕಿ ಇದನ್ನು ರೋಸ್ಟ್ ಮಾಡಿದರೆ ಬಿಸಿಬಿಸಿ ಬೆಳ್ಳುಳ್ಳಿ ಕಬಾಬ್ ಸವಿಯಲು ಸಿದ್ಧ.