ಸೌಂದರ್ಯದ ಹಿಂದೆ ಬಿದ್ದು ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡ ಮಹಿಳೆ ದುರಂತ ಅಂತ್ಯ..!

ಒಂದು ಕಾಲಕ್ಕೆ ಸೆಲೆಬ್ರಿಟಿಗಳು ಮಾತ್ರ ಸೌಂದರ್ಯವರ್ಧಕ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿದ್ದರು. ಕೆಲವು ಬಾರಿ ಅಪಘಾತದಿಂದ ಮುಖ ವಿರೂಪಗೊಂಡು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುತ್ತಿತ್ತು. ಇತ್ತೀಚೆಗೆ ಕಾಸ್ಮೆಟಿಕ್ ಸರ್ಜರಿ ಮೂಲಕ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೆಚ್ಚಾಗುತ್ತಿದೆ. ಹಣೆ, ಮೂಗು ಸೇರಿ ದೇಹದ ಪ್ರತಿ ಭಾಗಕ್ಕೂ ಕಾಸ್ಮೆಟಿಕ್ ಸರ್ಜರಿ ಮಾಡಬಹುದು. ಹುಬ್ಬು, ಕಣ್ಣುಗಳ ಕೆಳಗಿನ ಚರ್ಮ ಸಡಿಲವಾದರೆ ಅದನ್ನೂ ಸರಿಪಡಿಸಬಹುದು.

ಸಿನಿಮಾಗಳಲ್ಲಿ ನಟಿಯರನ್ನು ನೋಡಿದಾಗ ವಾವ್ ಎಂತಹ ಸೌಂದರ್ಯ ವೆಂದು ಉದ್ಘರಿಸುತ್ತೇವೆ. ಅವರಲ್ಲಿ ಬಹಳಷ್ಟು ಜನ ಸುಂದರವಾಗಿ ಕಾಣಲು ಶಸ್ತ್ರಚಿಕಿತ್ಸೆಗೆ ಒಳಗಾಗಿರುತ್ತಾರೆ ಎಂಬ ವಿಚಾರ ಬಹುತೇಕರಿಗೆ ಗೊತ್ತಿಲ್ಲ. ಹೌದು, ಇಂತಹದ್ದೇ ಸೌಂದರ್ಯವರ್ಧಕ ವಿಧಾನಕ್ಕೆ ಒಳಗಾಗಿ ಚೀನಾದ ಮಹಿಳೆಯೊಬ್ಬರು ದುರಂತ ಅಂತ್ಯ ಕಂಡಿದ್ದಾರೆ.

ಸೌಂದರ್ಯದ ಹುಚ್ಚು ಹತ್ತಿಸಿಕೊಂಡ ಆ ಮಹಿಳೆ ಒಂದೇ ದಿನದಲ್ಲಿ 6 ರೀತಿಯ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಳೆ. ಶಸ್ತ್ರ ಚಿಕಿತ್ಸೆ ಬಳಿಕ ಮಹಿಳೆ ಮೃತಪಟ್ಟಿದ್ದು ಅವರ ಕುಟುಂಬದವರು 168,000 ಅಮೆರಿಕನ್ ಡಾಲರ್ ಪರಿಹಾರಕ್ಕೆ ಕೋರ್ಟ್ ಮೆಟ್ಟಿಲೇರಿದ್ದಾರೆ.

Advertisement

ಮಾಹಿತಿ ಪ್ರಕಾರ, 24 ಗಂಟೆಗಳಲ್ಲಿ 6 ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಳೆ. ಲಿಯು ಒಂದೇ ದಿನದಲ್ಲಿ ಎರಡು ಕಣ್ಣಿನ ರೆಪ್ಪೆ, ಮೂಗು, ತೊಡೆ, ಮುಖ ಮತ್ತು ಸ್ತನಕ್ಕೆ ಶಸ್ತ್ರಚಿಕಿತ್ಸೆ ಪಡೆದಿದ್ದಾಳೆ. ಮಹಿಳೆ ಲಿಯು ಡಿಸ್ಚಾರ್ಜ್ ಆಗಿದ್ದು ಕ್ಲಿನಿಕ್ನ ಲಿಫ್ಟ್ನಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಈಗ ಮಹಿಳೆಯ ಕುಟುಂಬಸ್ಥರು ಕ್ಲಿನಿಕ್ ವಿರುದ್ಧ ನಾನಿಂಗ್ ಜಿಲ್ಲಾ ಪೀಪಲ್ಸ್ ಕೋರ್ಟ್ ಮೆಟ್ಟಿಲೇರಿದ್ದು 1.18 ಮಿಲಿಯನ್ ಯುವಾನ್ ಅಂದರೆ ಸುಮಾರು 168,000 ಅಮೆರಿಕನ್ ಡಾಲರ್ ಪರಿಹಾರ ಕೋರಿದ್ದಾರೆ. ಇಂತಹ ಸೌಂದರ್ಯವರ್ಧಕ ಚಿಕಿತ್ಸೆ ವಿಫಲವಾಗಿ ಮೃತಪಟ್ಟ ಮಹಿಳೆಗೆ ನಾನಿಂಗ್ ಜಿಲ್ಲಾ ಕೋರ್ಟ್ 1 ಮಿಲಿಯನ್ ಯುವಾನ್ ಅಂದರೆ 140, 000 ಅಮೆರಿಕನ್ ಡಾಲರ್ ಪರಿಹಾರ ನೀಡಲು ಆದೇಶಿಸಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement