ಬ್ರೆಜಿಲ್: ಸೌಂದರ್ಯ ಸ್ಪರ್ಧೆಯಲ್ಲಿ ತನ್ನ ಪತ್ನಿಗೆ ಕಿರೀಟ ಬಂದಿಲ್ಲ ಎಂದು ವ್ಯಕ್ತಿಯೊಬ್ಬ ಗೆಲುವು ಸಾಧಿಸಿದ ಮಹಿಳೆ ತಲೆಯಿಂದ ಕಿರೀಟವನ್ನು ತೆಗೆದು ನೆಲಕ್ಕೆ ಹೊಡೆದಿರುವ ಘಟನೆ ಬ್ರೆಜಿಲ್ನಲ್ಲಿ ನಡೆದಿದೆ.
ಸೌಂದರ್ಯ ಸ್ಪರ್ಧೆಯ ಸ್ಪರ್ಧಿಯ ಪತಿ ವೇದಿಕೆಯ ಮೇಲೆ ಹತ್ತಿ, ವಿಜೇತರ ಕಿರೀಟವನ್ನು ಕಿತ್ತುಕೊಂಡು ನೆಲಕ್ಕೆ ಒಡೆದುಹಾಕಿದ, ನಂತರ ಆತನ ಹೆಂಡತಿಗೆ ಎರಡನೇ ಸ್ಥಾನ ನೀಡಲಾಯಿತು.
ಇನ್ನು ಬ್ರೆಜಿಲ್ನಲ್ಲಿ ಮಿಸ್ ಗೇ ಮಾಟೊ ಗ್ರೊಸೊ 2023 ಸ್ಪರ್ಧೆಯಲ್ಲಿ ವಿಜೇತರನ್ನು ಘೋಷಿಸುತ್ತಿದ್ದಂತೆಯೇ ಈ ವ್ಯಕ್ತಿ ವೇದಿಕೆ ಮೇಲೆ ಬಂದು ಗಲಾಟೆ ಮಾಡಿದ್ದಾನೆ.
ಕಿರೀಟಧಾರಣೆ ಸಮಾರಂಭದಲ್ಲಿ ಇಬ್ಬರು ಫೈನಲಿಸ್ಟ್ಗಳಾದ ನತಲ್ಲಿ ಬೆಕರ್ ಮತ್ತು ಇಮಾನ್ಯುಲಿ ಬೆಲಿನಿ ಅವರನ್ನು ವಿಜೇತರು ಎಂದು ಘೋಷಣೆ ಮಾಡುವ ವೀಡಿಯೊದಲ್ಲಿ ತೋರಿಸುತ್ತದೆ. ಈ ಸಮಯದಲ್ಲಿ ಇಬ್ಬರು ಮುಂದೆ ಬರುತ್ತಾರೆ. ಕೊನೆಯಲ್ಲಿ ಬೆಲಿನಿ ಅವರನ್ನು ಅಂತಿಮವಾಗಿ ವಿಜೇತರಾಗಿ ಆಯ್ಕೆ ಮಾಡಲಾಗುತ್ತದೆ. ಅವರ ತಲೆಗೆ ಈ ಹೊಳೆಯುವ ಕಿರೀಟವನ್ನು ಇರಿಸಲು ಮುಂದಾಗುತ್ತಾರೆ. ಆದರೆ ಸಮಾರಂಭ ಪೂರ್ಣಗೊಳ್ಳುವ ಮುನ್ನವೇ ರನ್ನರ್ ಅಪ್ ಸ್ಪರ್ಧಿಯ ಪತಿ ಅದಕ್ಕೆ ಅಡ್ಡಿಪಡಿಸಿದ್ದಾರೆ.