ಗಾಝಾದಲ್ಲಿ ಇಸ್ರೇಲ್ ದಾಳಿ ಮುಂದುವರಿದಿರುವಾಗಲೇ ಮಸೀದಿಯ ಇಮಾಮ್ ಗಳಿಗೆ ಸೌದಿ ಅರೇಬಿಯಾ ಸರ್ಕಾರವು ಕಟ್ಟುನಿಟ್ಟಿನ ಸೂಚನೆಯೊಂದನ್ನು ನೀಡಿದೆ. ಮಸೀದಿಯಲ್ಲಿ ಪ್ಯಾಲೆಸ್ತೀನ್ಗಾಗಿ ಪ್ರಾರ್ಥನೆ ನಿಷೇಧಿಸಲಾಗಿದೆ.
ಹೌದು. ಇಮಾಮ್ಗಳು ಪ್ಯಾಲೆಸ್ತೀನ್ಗಾಗಿ ಪ್ರಾರ್ಥಿಸುವುದು ಅಥವಾ ಸೌದಿ ಮಸೀದಿಗಳಲ್ಲಿನ ಧರ್ಮೋಪದೇಶಗಳಲ್ಲಿ ಪ್ಯಾಲೆಸ್ತೀನ್ ಬಗ್ಗೆ ಉಲ್ಲೇಖಿಸುವುದನ್ನು ನಿಷೇಧ ಎಂದು ಸೌದಿ ಅರೇಬಿಯಾ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಹೇಳಿದ್ದಾರೆ. ಜೊತೆಗೆ ವೈಯಕ್ತಿಕವಾಗಿ ಫೆಲೆಸ್ತೀನ್ ಸಮಸ್ಯೆಯ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಕ್ಕಾ ಮತ್ತು ಮದೀನಾದಲ್ಲಿ, ಹಜ್ನಲ್ಲಿ ‘ರಾಜಕೀಯ ಘೋಷಣೆಗಳಿಗೆ’ ಅವಕಾಶವಿಲ್ಲ ಎಂದು ಸೌದಿ ಹೇಳಿದೆ.