ಹಾಸನ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ಸರ್ಕಾರಿ ನಿವಾಸಕ್ಕೆ ಎಸ್ಐಟಿ ತಂಡ ಬೀಗ ಜಡಿದಿದೆ.
ಹಾಸನ ನಗರದ ಆರ್ಸಿ ರಸ್ತೆಯಲ್ಲಿರುವ ಸಂಸದರ ಸರ್ಕಾರಿ ನಿವಾಸಕ್ಕೆ ಶನಿವಾರ ಸಂತ್ರಸ್ತೆಯೊಂದಿಗೆ ಎಸ್ ಐಟಿ ತೆರಳಿ ಸ್ಥಳ ಮಹಜರು ನಡೆಸಿತ್ತು. ಮಹಜರು ಪ್ರಕ್ರಿಯೆ ನಡೆದ ಬಳಿಕ ನಿವಾಸದ ಕೀ ಎಸ್ ಐಟಿ ಪಡೆದು, ಪ್ರಜ್ವಲ್ ನಿವಾಸವನ್ನು ಸಂಪೂರ್ಣವಾಗಿ ಸೀಜ್ ಮಾಡಲಾಗಿತ್ತು.
ಶನಿವಾರ ರಾತ್ರಿ ಎಸ್ ಐಟಿ 5 ಗಂಟೆ ಕಾಲ ಮಹಜರು, ಪರಿಶೀಲನೆ ನಡೆಸಿದೆ. ಪ್ರಜ್ವಲ್ ನಿವಾಸದ ಮೊದಲ ಮಹಡಿಯ ಕೊಠಡಿಯಲ್ಲಿ ಅತ್ಯಾಚಾರ ಆಗಿದೆ. ಸರ್ಕಾರಿ ನಿವಾಸದಲ್ಲೇ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.