ಸ್ಯಾಮ್ಸಂಗ್ ಮೊಬೈಲ್ ಫೋನ್ ಬಳಕೆದಾರರಿಗೆ ಹೆಚ್ಚಿನ ಅಪಾಯ:ಕೇಂದ್ರ ಸರಕಾರದಿಂದ ಎಚ್ಚರಿಕೆ

ಕಡಬ ಟೈಮ್ಸ್: ಭಾರತ ಸರಕಾರವು ವಿಶೇಷವಾಗಿ ಸ್ಯಾಮ್ಸಂಗ್ ಗ್ಯಾಲಕ್ಸಿ ಫೋನ್‌ಗಳ ಬಳಕೆದಾರರಿಗೆ ಹೆಚ್ಚುವರಿ ಭದ್ರತಾ ಎಚ್ಚರಿಕೆಗಳನ್ನು ಹೊರಡಿಸಿದೆ.

ಇಂಡಿಯನ್ ಕಂಪ್ಯೂಟರ್ ಎಮರ್ಜನ್ಸಿ ರಿಸ್ಪಾನ್ಸ್ ಟೀಮ್ (ಸಿಇಆರ್‌ಟಿ-ಇನ್) ಹೊರಡಿಸಿರುವ ಭದ್ರತಾ ಸಲಹೆಯು ಹಳೆಯ ಮತ್ತು ಹೊಸ ಮಾಡೆಲ್‌ಗಳು ಸೇರಿದಂತೆ ಲಕ್ಷಾಂತರ ಸ್ಯಾಮ್ಸಂಗ್ ಗ್ಯಾಲಕ್ಸಿ ಫೋನ್‌ಗಳ ಮೇಲೆ ಪರಿಣಾಮವನ್ನು ಬೀರಬಲ್ಲ ಹಲವಾರು ದುರ್ಬಲತೆಗಳನ್ನು ಎತ್ತಿ ತೋರಿಸಿದೆ.ಡಿ.13ರಂದು ಹೊರಡಿಸಲಾಗಿರುವ ಭದ್ರತಾ ಎಚ್ಚರಿಕೆಯು ಕಳವಳವನ್ನು ಹೆಚ್ಚಿನ ಅಪಾಯ ಎಂದು ವರ್ಗೀಕರಿಸಿದ್ದು, ಅಸ್ತಿತ್ವದಲ್ಲಿರುವ ಸ್ಯಾಮ್ಸಂಗ್ ಬಳಕೆದಾರರು ತಮ್ಮ ಫೋನ್‌ನ ಆಪರೇಟಿಂಗ್ ಸಿಸ್ಟಮ್ ಅಥವಾ ಫರ್ಮ್‌ವೇರ್ ಅನ್ನು ತಕ್ಷಣ ನವೀಕರಿಸುವ ತುರ್ತು ಅಗತ್ಯಕ್ಕೆ ಒತ್ತು ನೀಡಿದೆ.

ಸ್ಯಾಮ್ಸಂಗ್ ಉತ್ಪನ್ನಗಳಲ್ಲಿ ಹಲವಾರು ದೋಷಗಳು ವರದಿಯಾಗಿದ್ದು,ಇವು ಭದ್ರತಾ ನಿರ್ಬಂಧಗಳನ್ನು ಬೈಪಾಸ್ ಮಾಡಲು,ಸೂಕ್ಷ್ಮ ಮಾಹಿತಿಯನ್ನು ಪ್ರವೇಶಿಸಲು ಮತ್ತು ಉದ್ದೇಶಿತ ಸಿಸ್ಟಮ್‌ನಲ್ಲಿ ಅನಿಯಂತ್ರಿತ ಕೋಡ್ ಅನ್ನು ನುಸುಳಿಸಲು ಹ್ಯಾಕರ್‌ಗಳಿಗೆ ಅನುವು ಮಾಡಿಕೊಡಬಹುದು ಎಂದು ಸಿಇಆರ್‌ಟಿ-ಇನ್ ತಿಳಿಸಿದೆ. ವರದಿಯ ಪ್ರಕಾರ ಸ್ಯಾಮ್ಸಂಗ್ ಮೊಬೈಲ್ ಆ್ಯಂಡ್ರಾಯ್ಡ್ 11,12,13 ಮತ್ತು 14 ಆವೃತ್ತಿಗಳು ಹೆಚ್ಚಿನ ಅಪಾಯಕ್ಕೆ ಗುರಿಯಾಗುವ ಬೆದರಿಕೆಯಿದೆ.

Advertisement

ಸದ್ರಿ ದೋಷಗಳು ಮೊಬೈಲ್‌ನ ಭದ್ರತಾ ಕವಚಗಳಲ್ಲಿಯ ದುರ್ಬಲ ತಾಣಗಳಾಗಿವೆ. ಹ್ಯಾಕರ್‌ಗಳು ಈ ದುರ್ಬಲತೆಗಳನ್ನು ಕಂಡುಕೊಂಡರೆ ಅವರು ಫೋನ್‌ನ ರಹಸ್ಯ ಕೋಡ್ (ಸಿಮ್ ಪಿನ್) ಅನ್ನು ಕದಿಯಬಹುದು, ಗಟ್ಟಿ ಧ್ವನಿಯಲ್ಲಿ ಫೋನ್‌ಗೆ ಆಜ್ಞೆಗಳನ್ನು ಕೂಗಬಹುದು,ಖಾಸಗಿ ಎಆರ್ ಇಮೋಜಿ ಫೈಲ್‌ಗಳಲ್ಲಿ ಇಣುಕಬಹುದು,ಕ್ಯಾಸಲ್ ಗೇಟ್‌ನಲ್ಲಿ ಗಡಿಯಾರವನ್ನು ಬದಲಿಸಬಹುದು (ನಾಕ್ಸ್ ಗಾರ್ಡ್ ಲಾಕ್),ಫೋನ್‌ನ ಫೈಲ್‌ಗಳ ಸುತ್ತ ನಿಗಾ ಇರಿಸಬಹುದು(ಅನಿಯಂತ್ರಿತ ಫೈಲ್‌ಗಳನ್ನು ಪ್ರವೇಶಿಸಬಹುದು),ಪ್ರಮುಖ ಮಾಹಿತಿಯನ್ನು ಕದಿಯಬಹುದು, ಅನಿಯಂತ್ರಿತ ಕೋಡ್ ಅನ್ನು ಸಕ್ರಿಯಗೊಳಿಸಿ ಫೋನ್‌ನ್ನು ಬೊಂಬೆಯಂತೆ ನಿಯಂತ್ರಿಸಬಹುದು,ಇಡೀ ಫೋನ್ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು.

ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸೂಚನೆಗಳೇನು:: ತಮ್ಮ ಸಾಧನದ ಆಪರೇಟಿಂಗ್ ಸಿಸ್ಟಮ್ (ಒಎಸ್) ಮತ್ತು ಫರ್ಮ್‌ವೇರ್‌ನ್ನು ತಕ್ಷಣ ನವೀಕರಿಸುವಂತೆ ವರದಿಯು ಸೂಚಿಸಿದೆ. ಇದಕ್ಕೆ ವಿಫಲಗೊಂಡರೆ ಸ್ವಾಮ್ಸಂಗ್ ಫೋನ್‌ಗಳು ಹ್ಯಾಕರ್‌ಗಳಿಂದ ಸಂಭಾವ್ಯ ದಾಳಿಗಳಿಗೆ ಸುಲಭದ ಗುರಿಯಾಗಬಹುದು. ಸಿಸ್ಟಮ್ ನವೀಕರಣವನ್ನು ನಿರ್ಲಕ್ಷಿಸುವುದು ಸಾಧನದ ಸುರಕ್ಷತಾ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ಮತ್ತು ಸೂಕ್ಷ್ಮ ಮಾಹಿತಿಗಳನ್ನು ಪ್ರವೇಶಿಸಲು ಹ್ಯಾಕರ್‌ಗಳಿಗೆ ಅವಕಾಶವನ್ನು ಒದಗಿಸಬಹುದು. ಸ್ಯಾಮ್ಸಂಗ್ ಈ ಬೆದರಿಕೆಗಳಿಗೆ ಪರಿಹಾರವನ್ನು ಬಿಡುಗಡೆಗೊಳಿಸಿದೆ,ಅದನ್ನು ಸಾಧ್ಯವಾದಷ್ಟು ಶೀಘ್ರ ಅಳವಡಿಸಿಕೊಳ್ಳಲು ಬಳಕೆದಾರರಿಗೆ ವರದಿಯು ಸೂಚಿಸಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement