ಚಿತ್ರದುರ್ಗ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಗೃಹರಕ್ಷಕರ ಆಯ್ಕೆ ಸಮಿತಿ ಅಧ್ಯಕ್ಷರ ಆದೇಶದ ಮೇರೆಗೆ ಜಿಲ್ಲೆಯ ವಿವಿಧ ಘಟಕಗಳಲ್ಲಿ ಖಾಲಿ ಇರುವ ಗೃಹ ರಕ್ಷಕರ ಸ್ವಯಂ ಸೇವಕರನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಫೆ.15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಅರ್ಹತೆಗಳು: ಕನಿಷ್ಟ 19-45 ವರ್ಷ ಒಳಗಿರಬೇಕು, 10ನೇ ತರಗತಿ ಪಾಸಾಗಿರಬೇಕು, ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರಬಾರದು, ಉತ್ತಮ ದೇಹದಾಡ್ಯತೆ ಹೊಂದಿರಬೇಕು (168 ಎತ್ತರ, 50ಕೆಜಿ, ತೂಕ), ವ್ಯಾಸಾಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಅವಕಾಶವಿರುವುದಿಲ್ಲ, ಹಾಗೂ ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರಬಾರದು ಮತ್ತು ಗೃಹರಕ್ಷಕ ಸದಸ್ಯತ್ವಕ್ಕೆ ಸೇರ ಬಯಸುವವರು ಗರಿಷ್ಟ 5ಕಿ,ಮೀ ಒಳಗಿರಬೇಕು. ಡ್ರೈವರ್, ಪ್ಲಂಬರ್, ಕಂಪ್ಯೂಟರ್ ಆಪರೇಟರ್, ಎಲೆಕ್ಟ್ರಿಷಿಯನ್, ಅಡುಗೆ ಕೆಲಸ ತಿಳಿದವರಿಗೆ ಮೊದಲ ಆಧ್ಯತೆ ನೀಡಲಾಗುವುದು
ಖಾಲಿ ಇರುವ ಘಟಕಗಳು : ಚಿತ್ರದುರ್ಗ-20, ಚಳ್ಳಕೆರೆ-20, ಹೊಸದುರ್ಗ-20, ಹೊಳಲ್ಕೆರೆ-16, ಮರಡಿಹಳ್ಳಿ-25, ನಾಯಕನಹಟ್ಟಿ-15 ಹಾಗೂ ಬಿಜಿಕೆರೆ-10 ಇಲ್ಲಿ ಖಾಲಿ ಇರುವ ಗೃಹರಕ್ಷಕರ ಸ್ವಯಂ ಸೇವಕರನ್ನು ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಗೃಹ ರಕ್ಷಕ ಸದಸ್ಯರಾಗಲು ಇಚ್ಛೆ ಇರುವ ಸೇವಾ ಮನೋಭಾವವುಳ್ಳ ಅಭ್ಯರ್ಥಿಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಚಿತ್ರದುರ್ಗ ನಗರದ ಮೇದೇಹಳ್ಳಿ ರಸ್ತೆಯ ಅಗ್ನಿಶಾಮಕ ಠಾಣೆ ಪಕ್ಕದ ಜಿಲ್ಲಾ ಗೃಹ ರಕ್ಷಕದಳದ ಕಚೇರಿಯಲ್ಲಿ ಅರ್ಜಿ ನೀಡಲಾಗುವುದು. ಫೆ.05 ರಿಂದ ಅರ್ಜಿ ವಿತರಿಸಲಾಗುವುದು. ಫೆ.15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ 08194-200311, ಸಹಾಯಕ ಬೋಧಕ ಶರಣ ಬಸವರಾಜ್ ಮೊ : 8792086875, ಜಿಲ್ಲಾ ಬೋಧಕ ಹೆಚ್. ತಿಪ್ಪೇಸ್ವಾಮಿ ಮೊ: 9481047857 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾಗೃಹರಕ್ಷಕದಳದ ಸಮಾದೇಷ್ಠರು ತಿಳಿಸಿದ್ದಾರೆ.