ಮುಂಬೈ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಇನ್ನಷ್ಟು 14 ದಿನಗಳ ಕಾಲ ವಿಸ್ತರಿಸಲಾಗಿದೆ.
ಸೆ. 14 ರಂದು ಅವರ ಕಸ್ಟಡಿ ಅವಧಿ ಮುಗಿಯಬೇಕಿತ್ತು. ನಿನ್ನೆ ಮುಂಬೈ ಕೋರ್ಟ್ವೊಂದಕ್ಕೆ ಗೋಯಲ್ ಅವರನ್ನು ಹಾಜರುಪಡಿಸಿದ ಜಾರಿ ನಿರ್ದೇಶನಾಲಯ, ಕಸ್ಟಡಿ ಅವಧಿಯನ್ನು ವಿಸ್ತರಿಸಬೇಕೆಂದು ಕೋರಿತು. ಇದಕ್ಕೆ ನ್ಯಾಯಾಲಯ ಸಮ್ಮತಿಸಿದೆ. 74 ವರ್ಷದ ನರೇಶ್ ಗೋಯಲ್ ಅವರು ಸೆಪ್ಟೆಂಬರ್ 28ರವರೆಗೂ ಜುಡಿಷಿಯಲ್ ಕಸ್ಟಡಿಯಲ್ಲಿ ಮುಂದುವರಿಯಲಿದ್ದಾರೆ.
ಇನ್ನು ತಮ್ಮ ಬ್ಯಾಂಕ್ನಿಂದ ವಿವಿಧ ಅವಧಿಯಲ್ಲಿ, ವಿವಿಧ ಕಾರಣಗಳಿಗೆ ಪಡೆದಿದ್ದ 848.86 ಕೋಟಿ ರೂ ಮೊತ್ತದ ಸಾಲದಲ್ಲಿ 538.62 ಕೋಟಿ ರೂ ಹಣವನ್ನು ಜೆಟ್ ಏರ್ವೇಸ್ ಮರುಪಾವತಿಸದೇ ಬಾಕಿ ಉಳಿಸಿದೆ ಎಂದು ಕೆನರಾ ಬ್ಯಾಂಕ್ ದೂರು ನೀಡಿದ್ದು, ಆ ಸಂಬಂಧ ಎಫ್ಐಆರ್ ದಾಖಲಾಗಿತ್ತು.