ಮೈಸೂರು: ವೇಣುಗೋಪಾಲ ನಾಯಕ ಅವರ ಹತ್ಯೆ ಪ್ರಕರಣದಲ್ಲಿ ಬಿಜೆಪಿಯು ವಿನಾಃಕಾರಣ ನನ್ನ ಮಗನ ಹೆಸರನ್ನು ಎಳೆದು ತರುತ್ತಿದೆ. ಇದು ಧರ್ಮ, ರಾಜಕೀಯ ವ್ಯಾಪ್ತಿ ಎರಡಕ್ಕೂ ಬರುವುದಿಲ್ಲ ಎಂದು ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬ್ರಿಗೇಡ್ ಕಟ್ಟಿಕೊಂಡು ಹನುಮಂತ ಜಯಂತಿ ಚೆನ್ನಾಗಿ ಮಾಡಿದ್ದಾರೆ. ಜಯಂತಿ ವೇಳೆ ಬ್ರಿಗೇಡ್ ನಲ್ಲಿದ್ದವರೆ ಬೈಕ್ ನಿಲ್ಲಿಸುವ ವಿಚಾರ, ಪೋಟೋ ವಿಚಾರಕ್ಕೆ ಜಗಳ ನಡೆದಿವೆ. ನಂತರ ಬ್ರಿಗೇಡ್ ನಲ್ಲಿದ್ದವರೆ ಗಲಾಟೆ ಮಾಡಿಕೊಂಡಿದ್ದಾರೆ. ಆ ವೇಳೆ ಈ ಕೊಲೆಯಾಗಿದೆ ಎಂದರು.
ಇನ್ನು ಈ ಹತ್ಯೆಯ ಪ್ರಕರಣದಲ್ಲಿ ನನ್ನ ಮಗನ ಹೆಸರನ್ನು ಬಿಜೆಪಿ ವಿನಾಃಕಾರಣ ಎಳೆದು ತರುತ್ತಿದೆ. ಈ ಹಿಂದಯೂ ನನ್ನ ಮಗನ ಮೇಲೆ ಹೀಗೆ ವಿನಾಃಕಾರಣ ಆರೋಪ ಮಾಡಿದ್ದರು. ಮಾಫಿಯಾ ಮಾಡಿದ್ದವರೆ ಹಿಂದೆಯೂ ಮಗನ ಮೇಲೆ ಕೇಸ್ ಕೊಟ್ಟಿದ್ದರು ಎಂದಿದ್ದಾರೆ.
ಬಿಜೆಪಿ ಅವರು ಸುಳ್ಳುನ್ನು ಸತ್ಯ ಮಾಡಲು ಹೊರಟಿದ್ದಾರೆ. ಪೊಲೀಸರ ತನಿಖೆ ಸರಿ ದಾರಿಯಲ್ಲಿ ಇದೆ. ಘಟನೆಯಾದ 6 ಗಂಟೆಯೊಳಗೆ ಆರೋಪಿಗಳ ಬಂಧಿಸಿದ್ದಾರೆ ಎಂದರು.