ನವದೆಹಲಿ :ಅಕ್ಟೋಬರ್ 7 ರಂದು ಹಮಾಸ್ ಉಗ್ರರಿಂದ ಸೆರೆಹಿಡಿಯಲ್ಪಟ್ಟ ಜರ್ಮನ್ ಮಹಿಳೆ ಶಾನಿ ಲೌಕ್ ಸಾವನ್ನಪ್ಪಿದ್ದಾರೆ ಮತ್ತು ಆಕೆಯ ದೇಹವನ್ನು ಇಸ್ರೇಲಿ ಪಡೆಗಳು ಗಾಜಾದಲ್ಲಿ ಪತ್ತೆ ಮಾಡಿದೆ ಎಂದು ಅವರ ಕುಟುಂಬ ಮತ್ತು ಇಸ್ರೇಲ್ ಸರ್ಕಾರ ಇಂದು ದೃಢಪಡಿಸಿದೆ.
“ನನ್ನ ಸಹೋದರಿಯ ಮರಣವನ್ನು ನಾವು ಬಹಳ ದುಃಖದಿಂದ ಘೋಷಿಸುತ್ತೇವೆ” ಎಂದು ಆಕೆಯ ಸಹೋದರಿ ಆದಿ ಲೌಕ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. ಅಕ್ಟೋಬರ್ 7 ರಂದು ಹಮಾಸ್‌ನ ಅನಿರೀಕ್ಷಿತ ದಾಳಿಯ ಗುರಿಗಳಲ್ಲಿ ಒಂದಾದ ಗಾಜಾ ಗಡಿಯ ಬಳಿ ಸೂಪರ್‌ನೋವಾ ಸಂಗೀತ ಉತ್ಸವದಲ್ಲಿ ಭಾಗವಹಿಸುತ್ತಿದ್ದಾಗ 23 ವರ್ಷದ ಯುವತಿ ಶಾನಿ ಲೌಕ್ ಳನ್ನು ಒತ್ತೆಯಾಳಾಗಿ ಇರಿಸಲಾಗಿತ್ತು . ಅವಳು ನಾಪತ್ತೆಯಾದ ನಂತರ, ಶಾನಿ ಲೌಕ್ ಅವರನ್ನು ಮರಳಿ ಪಡೆಯಲು ಜರ್ಮನ್ ಮತ್ತು ಇಸ್ರೇಲ್ ಸರ್ಕಾರಗಳು ಆಕೆಯ ತಾಯಿ ರಿಕಾರ್ಡಾ ಲೌಕ್ ಮಾಡಿದ ಮನವಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. 23 ವರ್ಷದ ಯುವತಿಯನ್ನು ಸೆರೆಹಿಡಿದ ನಂತರ ಪಿಕ್ ಅಪ್ ಟ್ರಕ್‌ನಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿತ್ತು. ಇದೀಗ X ಖಾತೆಯಲ್ಲಿ ಯುವತಿಯ ಸಾವಿನ ಸುದ್ದಿಯನ್ನು ಇಸ್ರೇಲ್ ದೃಢಪಡಿಸಿದೆ.