ಗಾಜಾ: ಸುಮ್ಮನಿದ್ದ ಇಸ್ರೇಲ್ ನ್ನು ಹಮಾಸ್ ಉಗ್ರರರು ಕೆಣಕಿದ ಪರಿಣಾಮ ಪೆಟ್ಟಿನ ಮೇಲೆ ಪೆಟ್ಟು ತಿನ್ನುತ್ತಿದ್ದು ಅಮಾಯಕರ ಪ್ರಾಣವನ್ನು ಬಲಿ ಪಡೆಯುವ ಮೂಲಕ ಸರ್ವ ನಾಶ ಮಾಡದೆ ಬಿಡಲ್ಲ ಎಂದು ಇಸ್ರೇಲ್ ಸೇನೆ ಪಣ ತೊಟ್ಟಿದೆ.
ಇದರ ಮುಂದುವರಿದ ಭಾಗವಾಗಿ ಸೇನೆ ಗಾಜಾ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ಕೈಗೊಂಡಿದೆ. ಈ ಬಗ್ಗೆ ಒಂದು ವಿಡಿಯೋವನ್ನು ಎಕ್ಸ್‌ನಲ್ಲಿ ಇಸ್ರೇಲ್ ಹಂಚಿಕೊಂಡಿದ್ದು ಆಸ್ಪತ್ರೆಯ ಬಳಿಕ ಇಲ್ಲಿರುವ ಶಾಲೆಗಳನ್ನು ಉಗ್ರರರು ತಮ್ಮ ಶಸ್ತ್ರಾಸ್ತ್ರ ತಾಣವಾಗಿ ಮಾಡಿಕೊಂಡಿದೆ ಎಂದು ಆರೋಪಿಸಿದೆ.ಈ ಕುರಿತಾಗಿ ಸಾಕ್ಷ್ಯ ಸಮೇತ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗಿದ್ದು ರಾಕೆಟ್ ಲಾಂಚರ್, ಮಾರ್ಟರ್ ಶೆಲ್ ಗಳು ಪತ್ತೆಯಾಗಿದೆ.
ಈ ಹಿಂದಿನ ಕಾರ್ಯಾಚರಣೆಯಲ್ಲಿ ಇಸ್ರೇಲ್ ಸೇನೆ ಹಮಾಸ್ ಉಗ್ರರು ಆಸ್ಪತ್ರೆಗಳ ನೆಲಮಾಳಿಗೆಯಲ್ಲಿ ಸಂಗ್ರಹಿಸಿ ಇಟ್ಟಿದ್ದ ಸ್ಫೋಟಕ ಬಾಡಿ ವೆಸ್ಟ್ಗಳು ಮತ್ತು ಹ್ಯಾಂಡ್ ಗ್ರೆನೇಡ್ಗಳನ್ನು ಪತ್ತೆ ಮಾಡಿತ್ತು. ಇದರ ಜೊತೆಗೆ ಇಸ್ರೇಲ್ ನಾಗರಿಕರನ್ನು ಒತ್ತೆಯಾಳುಗಳಾಗಿ ಇಲ್ಲಿ ಇಡಲಾಗಿದೆ ಎಂದು ಹೇಳಿತ್ತು.
ಇಸ್ರೇಲ್‌ನ ಕಾರ್ಯಚರಣೆಗೆ ಹಮಾಸ್ ನಲುಗಿ ಹೋಗಿದೆ. ಅ.7 ರಂದು ಇಸ್ರೇಲ್ ಮೇಲೆ ದಾಳಿ ಮಾಡಿದ ಹಮಾಸ್ 1,200 ಜನರನ್ನು ಹತ್ಯೆ ಮಾಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಇಸ್ರೇಲ್ ಕೂಡ ದಾಳಿ ಮಾಡಿ ನಾಲ್ಕು ಸಾವಿರ ಹಮಾಸ್ ಉಗ್ರರನ್ನು ಹತ್ಯೆ ಮಾಡಿತ್ತು.