ಉಗ್ರ ಸಂಘಟನೆಯಾದ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ಹಾರ್‌ನನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ದೇಶಾಂಗ ಸಚಿವ ಎಲಿ ಕೊಹೆನ್ ಹೇಳಿದ್ದಾರೆ.
ಇಸ್ರೇಲ್‌ನಲ್ಲಿ 2023ರ ಅಕ್ಟೋಬರ್ 7ರಂದು ನಡೆದಿದ್ದ ನರಮೇಧಕ್ಕೆ ಕಾರಣಕರ್ತನಾಗಿದ್ದ ವ್ಯಕ್ತಿ ಯಾಹ್ಯಾ ಸಿನ್ವಾರ್.
ಆ ಬಳಿಕ ಇಸ್ರೇಲ್ ಹಮಾಸ್ ಉಗ್ರರನ್ನು ಗುರಿಯಾಗಿಸಿಕೊಂಡು ಗಾಜಾ ಮೇಲೆ ಯುದ್ಧ ಸಾರಿತ್ತು. ಆದರೆ ಇಂದು ಗಾಜಾದಲ್ಲಿ ನಡೆದ ದಾಳಿಯಲ್ಲಿ ಐಡಿಎಫ್ ಸೈನಿಕರು ಯಾಹ್ಯಾನನ್ನು ಕೊಂದಿರುವುದಾಗಿ ಇಸ್ರೇಲ್ ಘೋಷಿಸಿದೆ.
ಆ ಮೂಲಕ ಹಮಾಸ್‌ನ ನಾಯಕನನ್ನೇ ಮುಗಿಸುವಲ್ಲಿ ಇಸ್ರೇಲ್ ಯಶಸ್ವಿಯಾಗಿದೆ.