ಹಮಾಸ್ ಮುಖ್ಯಸ್ಥ ಹನಿಯೆಹ್‌ನನ್ನು ಕೊಲೆ ಮಾಡಲು ಮೊದಲೇ ಪ್ಲ್ಯಾನ್ ಆಗಿತ್ತು. ಇದಕ್ಕಾಗಿ ಇರಾನ್ ಏಜೆಂಟ್‌ಗಳನ್ನು ಇಸ್ರೇಲ್ ನೇಮಿಸಿಕೊಂಡಿತ್ತು. ಪೂರ್ವಸಿದ್ಧತೆಯಾಗಿ ಮೂರು ಕೊಠಡಿಗಳಲ್ಲಿ ಬಾಂಬ್ ಇರಿಸಿಕೊಳ್ಳಲಾಗಿತ್ತು ಎಂದು ವರದಿಯಾಗಿದೆ.
ಟೆಹ್ರಾನ್‌ನ ಕಟ್ಟಡವೊಂದರಲ್ಲಿ ನೆಲೆಸಿದ್ದ ಹಮಾಸ್ ಮುಖ್ಯಸ್ಥ ಹನಿಯೆಹ್‌ನನ್ನು ಹತ್ಯೆ ಮಾಡಲು ಮತ್ತು ಕಟ್ಟಡವನ್ನು ಸ್ಫೋಟಿಸಲು ಇಸ್ರೇಲ್‌ನ ಗುಪ್ತಚರ ಇಲಾಖೆಯ ಮುಖ್ಯಸ್ಥರೊಬ್ಬರು ಇರಾನ್ ಏಜೆಂಟ್‌ಗಳನ್ನು ಕರೆಸಿಕೊಂಡಿದ್ದರು. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಅತಿಥಿಗೃಹದ ಮೂರು ಪ್ರತ್ಯೇಕ ಕೊಠಡಿಗಳಲ್ಲಿ ಸ್ಫೋಟಕ ಸಾಧನಗಳನ್ನು ಪೂರ್ವಯೋಜನೆ ಮಾಡಿಕೊಂಡೇ ಕಟ್ಟಡದ ಮೇಲೆ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ.