ಬೇಗನೆ ತಯಾರಾಗಿ ಬಿಡುವ ಹಲಸಿನಹಣ್ಣಿನ ಇಡ್ಲಿ ಇದೆ. ಹಲಸಿನಹಣ್ಣಿನ ಸೀಸನ್ ಮುಗಿಯುವುದರೊಳಗೆ ಮಾಡಿಕೊಂಡು ಸವಿಯಿರಿ.
ಬೇಕಾಗುವ ಸಾಮಾಗ್ರಿಗಳು:
15 ರಿಂದ 20ರಷ್ಟು ಹಲಸಿನಹಣ್ಣಿನ ತೊಳೆ, ಅಕ್ಕಿ ತರಿ – 1 ಕಪ್, ಬೆಲ್ಲ – 1 ಕಪ್ (ಪುಡಿ ಮಾಡಿಕೊಂಡಿದ್ದು), ತುಪ್ಪ – 1 ಟೀ ಸ್ಪೂನ್, ಉಪ್ಪು – ಚಿಟಿಕೆ, ಏಲಕ್ಕಿ – ಚಿಟಿಕೆ.
ಮಾಡುವ ವಿಧಾನ:
ಮೊದಲಿಗೆ ಹಲಸಿನಹಣ್ಣಿನ ತೊಳೆಗಳ ಬೀಜ ತೆಗೆದು ತೊಳೆಗಳನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ, ನೀರು ಸೇರಿಸಬೇಡಿ. ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಅಕ್ಕಿ ತರಿಯನ್ನು ಸೇರಿಸಿ 5 ನಿಮಿಷಗಳ ಕಾಲ ಹುರಿಯಿರಿ. ನಂತರ ಮಿಕ್ಸಿಯಲ್ಲಿ ರುಬ್ಬಿದ ಹಲಸಿನ ಹಣ್ಣಿನ ಮಿಶ್ರಣಕ್ಕೆ ಈ ತರಿಯನ್ನು ಹಾಕಿ ಬೆಲ್ಲ, ಏಲಕ್ಕಿ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ½ ಗಂಟೆಗಳ ಕಾಲ ಹಾಗೆಯೇ ಇಡಿ. ನಂತರ ಒಂದು ತಟ್ಟೆಗೆ ತುಪ್ಪ ಸವರಿ ಅದಕ್ಕೆ ಮಾಡಿಟ್ಟುಕೊಂಡ ಈ ಮಿಶ್ರಣ ಹಾಕಿ ಇಡ್ಲಿ ಪಾತ್ರೆಯ ಆವಿಯಲ್ಲಿ ಬೇಯಿಸಿಕೊಂಡರೆ ರುಚಿಕರವಾದ ಹಲಸಿನಹಣ್ಣಿನ ಇಡ್ಲಿ ಸವಿಯಲು ಸಿದ್ಧ.