ನವದೆಹಲಿ: ಹಳೆ ಸಂಸತ್ ಭವನಕ್ಕೆ ಸಂಸದರು ಇಂದು ಸವಿ ನೆನಪುಗಳೊಂದಿಗೆ ವಿದಾಯ ಹೇಳಿದರು. ಪ್ರಧಾನಿ ಮೋದಿ ಸೇರಿದಂತೆ ಎಲ್ಲಾ ಸಂಸತ್ ಸದಸ್ಯರು ಒಟ್ಟಾಗಿ ಸೇರಿ ಫೋಟೋಶೂಟ್ ಮಾಡಿಸಿಕೊಂಡರು.
ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನಕರ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಇತರ ಸಂಸದರು ಇಂದಿನ ಸಂಸತ್ತಿನ ಅಧಿವೇಶನದ ಮೊದಲು ಜಂಟಿ ಫೋಟೋ ಸೆಷನ್‌ನಲ್ಲಿ ಪಾಲ್ಗೊಂಡಿದ್ದರು.
ಬಿಜೆಪಿ ಸಂಸದ ನರಹರಿ ಅಮೀನ್ ಅವರು ಸಂಸದರ ಗ್ರೂಪ್ ಫೋಟೋಶೂಟ್ ವೇಳೆ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಸ್ವಲ್ಪ ಹೊತ್ತು ಸುಧಾರಿಸಿಕೊಂಡು ನಂತರ ಮತ್ತೆ ಫೋಟೋಶೂಟ್‌ನಲ್ಲಿ ಸೇರಿದರು.
ಕಾಂಗ್ರೆಸ್‌ನ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಸಂಸತ್ ಸದಸ್ಯರೂ ಆಗಿರುವ ವಿಪಕ್ಷಗಳ ನಾಯಕರು ಸಹ ಫೋಟೋಶೂಟ್‌ನಲ್ಲಿ ಪಾಲ್ಗೊಂಡರು.