ನವದೆಹಲಿ: ದೇಶದ ಪ್ರಥಮ ಪ್ರಧಾನಿ ನೆಹರು ಅವರು ಸಂಸತ್ ನಲ್ಲಿ ಮಾಡಿದ ಐತಿಹಾಸಿಕ ಭಾಷಣದ ಪ್ರತಿಧ್ವನಿಯು ದೇಶದ ಚುನಾಯಿತ ಜನಪ್ರತಿನಿಧಿಗಳಿಗೆ ಸ್ಫೂರ್ತಿ ನೀಡುವುದು ನಿರಂತರವಾಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು ಇಂದು ಹಳೆಯ ಸಂಸತ್ ಭವನದಲ್ಲಿ ಆರಂಭಗೊಂಡ ವಿಶೇಷ ಅಧಿವೇಶನದಲ್ಲಿ ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಿದ್ದು, ‘ಸ್ವಾತಂತ್ರ್ಯದ ನಂತರ ಈ ಕಟ್ಟಡಕ್ಕೆ ಸಂಸತ್ತಿನ ಮಾನ್ಯತೆ ದೊರೆಯಿತು. ದೇಶ ಮುನ್ನಡೆಯಲು ಅವಕಾಶವಿದೆ. ಈ ಕಟ್ಟಡವನ್ನು ವಿದೇಶಿಗರು ನಿರ್ಮಿಸಿದ್ದಾರೆ, ಆದರೆ ನನ್ನ ದೇಶವಾಸಿಗಳ ಶ್ರಮ, ಹಣ ಮತ್ತು ಬೆವರು ಇದರ ನಿರ್ಮಾಣಕ್ಕೆ ಹೂಡಿಕೆಯಾಗಿದೆ. ಈ ಕಟ್ಟಡ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಲಿದೆ ಎಂದಿದ್ದಾರೆ.
ಹಳೆಯ ಕೆಡುಕುಗಳನ್ನು ಬಿಟ್ಟು ಉತ್ತಮವಾದ ಒಳ್ಳೆಯ ಯೋಚನೆಯೊಂದಿಗೆ ಹೊಸ ಸಂಸತ್ ಪ್ರವೇಶಿಸಿ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಹೊಸ ಸಂಕಲ್ಪ, ಹೊಸ ಶಕ್ತಿ ಮತ್ತು ಹೊಸ ನಂಬಿಕೆಯೊಂದಿಗೆ ಮುನ್ನಡೆಯುವುದು, ಭಾರತದ ಅಭಿವೃದ್ಧಿ ಪಯಣ ಸುಗಮವಾಗಿ ಸಾಗುತ್ತದೆ. ಅಧಿವೇಶನವು ಚಿಕ್ಕದಾಗಿದೆ, ಆದರೆ ಬಹಳ ಮೌಲ್ಯಯುತವಾಗಿದೆ ಎಂದು ಹೇಳಿದ್ದಾರೆ