ಹಾಲಿಲ್ಲದೆ ರುಚಿಕರವಾದ ಹಾಲು ಕೋವಾ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು…

  • ಮೈದಾ ಹಿಟ್ಟು- 2 ಚಿಕ್ಕ ಬಟ್ಟಲು
  • ತುಪ್ಪ- 1 ಬಟ್ಟಲು
  • ಸಕ್ಕರೆ- 1 1/2 ಬಟ್ಟಲು
  • ಏಲಕ್ಕಿ- 3

ಮಾಡುವ ವಿಧಾನ…

  • ಒಂದು ಪಾತ್ರೆಯಲ್ಲಿ 1 ಕಪ್ ತುಪ್ಪ ಮತ್ತು 2 ಕಪ್ ಮೈದಾವನ್ನು ಹಾಕಿ. ಕಡಿಮೆ ಉರಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. 10 ನಿಮಿಷಗಳ ಬಳಿಕ ಮೈದಾ ತುಪ್ಪದೊಂದಿಗೆ ಚೆನ್ನಾಗಿ ಮಿಶ್ರಣವಾಗಿ ಗಟ್ಟಿಯಾಲು ಶುರುವಾಗುತ್ತದೆ.  ಗಟ್ಟಿಯಾದ ಬಳಿಕ ಇದನ್ನು ಒಂದು ಪಾತ್ರೆಗೆ ವರ್ಗಾಯಿಸಿ ತಣ್ಣಗಾಗಲು ಬಿಡಿ.
  • ಮಿಕ್ಸಿ ಜಾರ್’ಗೆ ಸಕ್ಕರೆ ಹಾಗೂ ಏಲಕ್ಕಿ ಪುಡಿ ಹಾಕಿ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಸ್ವಲ್ಪ ಸ್ವಲ್ಪವೇ ಮೈದಾಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದು ಗಟ್ಟಿಯಾಗುತ್ತದೆ.
  • ಬಳಿಕ ಇದನ್ನು ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿ, ಸಮತಟ್ಟಾಗಿಸಿ, 2 ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಡಿ. ಬಳಿಕ ಫ್ರಿಡ್ಜ್ ನಿಂದ ಹೊರ ತೆಗೆದ 30 ನಿಮಿಷಗಳ ಬಳಿಕ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ. ಇದೀಗ ರುಚಿಕರವಾದ ಹಾಲು ಕೋವಾ ಸವಿಯಲು ಸಿದ್ಧ.
Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement