ಹಾಸನದಲ್ಲಿ ಡೆಂಗ್ಯೂ ಹೆಚ್ಚಾಗಿ ಮಕ್ಕಳಲ್ಲೇ ಪತ್ತೆಯಾಗುತ್ತಿದೆ. ಒಂದೇ ವಾರದಲ್ಲಿ 15 ವರ್ಷದೊಳಗಿನ ಮೂರು ಹೆಣ್ಣು ಮಕ್ಕಳು ಡೆಂಗ್ಯೂಗೆ ಮೃತಪಟ್ಟಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಲ್ಲೂ ಮಕ್ಕಳ ಸಂಖ್ಯೆಯೇ ಹೆಚ್ಚಿದೆ.
ಹಿಮ್ಸ್‌ನಲ್ಲಿ ಚಿಕಿತ್ಸೆಗೆ ದಾಖಲಾಗಿರುವ 48 ಮಂದಿಯಲ್ಲಿ 11 ಮಕ್ಕಳಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಳೆದ ಜನವರಿಯಿಂದ ಈವರೆಗೆ 628
ವಯಸ್ಕರು ಹಾಗು 602 ಡೆಂಗ್ಯೂ ಪೀಡಿತ ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗಿದೆ. ರಾಜ್ಯ ಡೆಂಗ್ಯೂ ಡೆತ್ ಆಡಿಟ್ ಸಮಿತಿ ಎರಡು ಸಾವುಗಳನ್ನ ದೃಡಪಡಿಸಿದೆ.