ಚಿತ್ರದುರ್ಗ:ಸಿಬ್ಬಂದಿ ನೇಮಕಾತಿ ಆಯೋಗವು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹಿಂದಿ ಅನುವಾದಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.
ಕಂಪ್ಯೂಟರ್ ಆಧಾರಿತವಾಗಿ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹಿಂದಿ ಅಥವಾ ಇಂಗ್ಲೀಷ್‌ನಲ್ಲಿ ಸಾತ್ನಕೋತ್ತರ ಪದವಿ ಪಡೆದಿರಬೇಕು. ಪದವಿಯಲ್ಲಿ ಹಿಂದಿ ಅಥವಾ ಇಂಗೀಷ್ ವಿಷಯವನ್ನು ಕಡ್ಡಾಯವಾಗಿ ಓದಿರಬೇಕು. ಹಿಂದಿಯಿAದ ಇಂಗ್ಲೀಷ್ ಭಾಷಾಂತರದಲ್ಲಿ ಡಿಪ್ಲೋಮ ಪದವಿ ಪಡೆದಿರಬೇಕು ಅಥವಾ ಭಾಷಾಂತರದಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಎರೆಡು ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇರಬೇಕು. 18-30 ವರ್ಷದೊಳಗಿನ ವಯೋಮಿತಿ ನಿಗಿದಿ ಮಾಡಲಾಗಿದೆ.
ಎಸ್.ಸಿ. ಎಸ್.ಟಿ, ಓಬಿಸಿ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಲಿಕೆ ಇರುತ್ತದೆ. ಅರ್ಜಿ ಸಲ್ಲಿಸಲು ಆಗಸ್ಟ್ 25 ಕಡೆಯ ದಿನವಾಗಿದೆ. ನೇಮಕಾತಿ ಪರೀಕ್ಷೆಯು ಅಕ್ಟೋಬರ್ ಅಥವಾ ನವೆಂಬರ್ ಮಾಹೆಯಲ್ಲಿ ಜರುಗಲಿದೆ.
ಹೆಚ್ಚಿನ ಮಾಹಿತಿಗಾಗಿ www.ssckkr.kar.nic.in https://ssc.nic.in ವೆಬ್ ಸೈಟ್‌ಗೆ ಭೇಟಿ ನೀಡಬಹುದು. ನೇಮಕಾತಿ ಆಯೋಗದ ದೂರವಾಣಿ ಸಂಖ್ಯೆ 080-25502520 ಕರೆ ಮಾಡಬಹುದು. ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಕಚೇರಿ ದೂರವಾಣಿ ಸಂಖ್ಯೆ 9945587060, 7022459064 ಸಂಪರ್ಕಿಸಬಹುದು ಎಂದು ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.