ಚಿತ್ರದುರ್ಗ : ಆನೆಬಾಗಿಲು ಸಮೀಪವಿರುವ ಆಂಜೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಿಂದೂ ಘರ್ಜನೆ ಸೇನಾ ಸಂಸ್ಥಾನ ವತಿಯಿಂದ ದುರ್ಗಾದೇವಿಯನ್ನು ಭಾನುವಾರ ಪ್ರತಿಷ್ಠಾಪಿಸಿ ಒಂಬತ್ತು ದಿನಗಳ ಕಾಲ ಶ್ರದ್ದಾಭಕ್ತಿಯಿಂದ ಪೂಜೆ ಸಲ್ಲಿಸಲಾಗುತ್ತದೆ.
ಒಂದು ಕೈಯಲ್ಲಿ ತ್ರಿಶೂಲ ಮತ್ತೊಂದು ಕೈಯಲ್ಲಿ ಬಾಣ ಹಿಡಿದಿರುವ ದುರ್ಗಾದೇವಿಯನ್ನು ಕಂಗೊಳಿಸುವಂತೆ ಬಣ್ಣ ಬಣ್ಣದ ಹೂವು ಹಾರಗಳಿಂದ ಸಿಂಗರಿಸಲಾಗಿದೆ. ಬೆಳಗಿನಿಂದ ಸಂಜೆಯತನಕ ನೂರಾರು ಭಕ್ತರು ಧಾವಿಸಿ ಶ್ರದ್ದಾಭಕ್ತಿಯನ್ನು ಸಮರ್ಪಿಸಿದರು.
ಹದಿನೈದರಂದು ಸಂಜೆ ಕಲಾಂಜಲಿ ಮೆಲೋಡಿಸ್ನವರಿಂದ ವಾದ್ಯಗೋಷ್ಠಿ. 16 ರಂದು ಸಪ್ತಗಿರಿ ಭಜನಾ ಮಂಡಳಿಯಿಂದ ದೇವರ ನಾಮಗಳು. 17 ರಂದು ನೃತ್ಯ ಸ್ಪರ್ಧೆ, 18 ರಂದು ಚಿತ್ರದುರ್ಗ ಸಿಂಗರ್ಸ್ ಜೋನ್ ಇವರಿಂದ ವಾದ್ಯಗೋಷ್ಠಿ, 19 ರಂದು ಹರಟೆ ಕಟ್ಟೆ ಚರ್ಚಾ ಕಾರ್ಯಕ್ರಮ. 20 ರಂದು ಶ್ರೀಕಾಂತ್ ಇವರಿಂದ ಅಷ್ಪಲಕ್ಷ್ಮಿ ಪೂಜೆ, 21 ರಂದು ಬೆಳಿಗ್ಗೆ ಸರಸ್ವತಿ ಪೂಜೆ ಹಾಗೂ ಅಕ್ಷರಾಭ್ಯಾಸ, 22 ರಂದು ದುರ್ಗಾಷ್ಟಮಿ ಪ್ರಯುಕ್ತ ಮೈಸೂರಿನ ದಯಾನಂದ ಶರ್ಮ ಇವರಿಂದ ಗಣ ಹೋಮ, ನವಗ್ರಹ ಹೋಮ, ಧ್ವನಂತರಿ ಹೋಮ, ಸುದರ್ಶನ ಹೋಮ, ನರಸಿಂಹ ಹೋಮ, ಲಕ್ಷ್ಮಿನಾರಾಯಣ ಹೋಮ, ಲಲಿತ ಹೋಮ, ದುರ್ಗಾ ಹೋಮ, ನವ ದುರ್ಗಾ ಹೋಮ, ಅನ್ನಸಂತರ್ಪಣೆ.
23 ರಂದು ಆಯುಧ ಪೂಜೆ ಪ್ರಯುಕ್ತ ಗುರುರಾಜ್ ಇವರಿಂದ ಕೊಳಲು ವಾದನ, 24 ರಂದು ಬನ್ನಿ ಮುಡಿಯುವ ಉತ್ಸವ, ಸಂಜೆ ಭಕ್ತಿಗೀತೆಗಳು, 25 ರಂದು ನಗರದ ಪ್ರಮುಖ ಬೀದಿಗಳಲ್ಲಿ ದುರ್ಗಾದೇವಿಯ ಶೋಭಾಯಾತ್ರೆ ನಂತರ ಚಂದ್ರವಳ್ಳಿಯಲ್ಲಿ ವಿಸರ್ಜಿಸಲಾಗುವುದು. ಭಕ್ತಾಧಿಗಳು ಒಂಬತ್ತು ದಿನಗಳ ಕಾಲ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದುರ್ಗಾದೇವಿಯ ಕೃಪೆಗೆ ಪಾತ್ರರಾಗುವಂತೆ ಹಿಂದೂ ಘರ್ಜನೆ ಸೇನಾ ಸಂಸ್ಥಾನ ಅಧ್ಯಕ್ಷ ಸಾಗರ್ ವಿನಂತಿಸಿದ್ದಾರೆ.