ವಾರಣಾಸಿ: ವಾರಣಾಸಿ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಮಸೀದಿ ಆವರಣದ ವೀಡಿಯೊಗ್ರಫಿ ನಡೆಸುತ್ತಿರುವ ಸಮೀಕ್ಷಾ ತಂಡಕ್ಕೆ ಸಮೀಕ್ಷೆಯ ವೇಳೆ ಕಂಡುಬಂದಿರುವ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ಸಂರಕ್ಷಿಸಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಸಲ್ಲಿಸುವಂತೆಯೂ ನ್ಯಾಯಾಲಯ ಆದೇಶಿಸಿದೆ.
ಎಎಸ್ಐ ಸಮೀಕ್ಷೆಯ ಸಮಯದಲ್ಲಿ ಕಂಡುಬರುವ ಹಿಂದೂ ಧರ್ಮಕ್ಕೆ ಮತ್ತು ಆರಾಧಾನ ಪದ್ಧತಿಗೆ ಅಥವಾ ಐತಿಹಾಸಿಕ ಅಥವಾ ಪುರಾತತ್ವದ ಹಿನ್ನೆಲೆಯಿಂದ ಪ್ರಕರಣಕ್ಕೆ ಸೂಕ್ತವಾಗಿದ್ದರೆ ಅವುಗಳ ಪಟ್ಟಿಯನ್ನು ಸಿದ್ಧಪಡಿಸಲು ಮತ್ತು ಎಲ್ಲಾ ವಸ್ತುಗಳನ್ನು ಸಂರಕ್ಷಿಸಲು ವಾರಣಾಸಿ ಜಿಲ್ಲಾ ನ್ಯಾಯಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶಿಸಿದೆ.
ಪಟ್ಟಿಯ ಪ್ರತಿಯನ್ನು ನ್ಯಾಯಾಲಯ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲು ನ್ಯಾಯಾಲಯ ಆದೇಶಿಸಿದೆ ಎಂದು ಹಿಂದೂ ಪರ ವಕೀಲ ಅನುಪಮ್ ದ್ವಿವೇದಿ ತಿಳಿದ್ದಾರೆ.
ಶಿವಲಿಂಗ, ಕಮಲದ ಕೆತ್ತನೆಗಳು, ಕಲಶ ಮತ್ತು ಪ್ರಾಚೀನ ಹಿಂದಿ ಭಾಷೆ ಸೇರಿದಂತೆ ಹಲವಾರು ಹಿಂದೂ ಧಾರ್ಮಿಕ ವಸ್ತುಗಳು ಸಮೀಕ್ಷೆಯ ಸಮಯದಲ್ಲಿ ಕಂಡುಬಂದಿವೆ ಎಂದು ಪ್ರಕರಣದಲ್ಲಿ ಹಿಂದೂ ಕಡೆಯವರು ಹೇಳಿಕೊಂಡ ನಂತರ ನ್ಯಾಯಾಲಯದ ಆದೇಶ ಬಂದಿದೆ. ಮಸೀದಿ ಮಂಡಳಿ ಇದನ್ನು ನಿರಾಕರಿಸಿದ್ದು, ವಸ್ತುಗಳು ಕೇವಲ ಮಸೀದಿಯ ವಾಸ್ತುಶಿಲ್ಪದ ಭಾಗವಾಗಿದೆ ಎಂದು ಹೇಳಿದೆ.