ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂಸಾಚಾರದ ಪ್ರತಿಭಟನೆ ನಡೆದಿದ್ದು, ಇಡೀ ವಿಶ್ವದ ಗಮನಸೆಳೆದಿದೆ. ಬಾಂಗ್ಲಾದೇಶದಲ್ಲಿ ಈ ಹಿಂಸಾಚಾರ ನಡೆದ ನಂತರ ಅಲ್ಲಿನ ಪ್ರಧಾನಿಯಾಗಿದ್ದ ಶೇಖ್ ಹಸೀನಾ ದೇಶವನ್ನೇ ತೊರೆದಿದ್ದರು. ಇದೀಗ ಅಲ್ಲಿನ ಮೂಲಭೂತವಾದಿ ಸಂಘಟನೆಯಾಗಿರುವ ಹೆಫಾಜತ್-ಇ-ಇಸ್ಲಾಂ ಸಂಘಟನೆಯ ಉಪಾಧ್ಯಕ್ಷ ಮುಹಿಯುದ್ದೀನ್ ರಬ್ಬಾನಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. “ನಾವು ಬಾಂಗ್ಲಾ ದೇಶದಲ್ಲಿ ಇಸ್ಲಾಮಿಕ್ ಆಡಳಿತವನ್ನು ತರುತ್ತೇವೆ. ಎಲ್ಲಾ ಹಿಂದೂ ವಿಗ್ರಹಗಳನ್ನು ವಿಸರ್ಜಿಸಿ, ಶರಿಯಾ ವ್ಯವಸ್ಥೆಯನ್ನು ಜಾರಿಗೆ ತರುವುದು ನಮ್ಮ ಗುರಿಯಾಗಿದೆ. ದೇಶದಲ್ಲಿ ಇಸ್ಲಾಂ ಸರ್ಕಾರ ಸ್ಥಾಪನೆಯಾದರೆ ನ್ಯಾಯ ದೊರಕುತ್ತದೆ. ಬಾಂಗ್ಲಾದೇಶವನ್ನು ಇಸ್ಲಾಂ ಧರ್ಮದ ಪ್ರಕಾರ ನಡೆಸಬೇಕು. ಕಾನೂನು ಮತ್ತು ಸಂವಿಧಾನದ ಪ್ರಕಾರ ಅಲ್ಲ ಎಂಬ ಹೇಳಿಕೆ ನೀಡಿದ್ದಾರೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.