ಹುಬ್ಬಳ್ಳಿ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಹಳೇ ಹುಬ್ಬಳ್ಳಿ ಗಲಾಟೆ ಪ್ರಕರಣದ 108 ಆರೋಪಿಗಳಿಗೆ ಎರಡು ವರ್ಷದ ಬಳಿಕ ಬಿಡುಗಡೆ ಜಾಮೀನು ಮಂಜೂರಾಗಿದೆ.
ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ 108 ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಉಳಿದ ಮೂವರು ಆರೋಪಿಗಳ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿ ಇರುವ ಕಾರಣ ಜಾಮೀನು ವಿಳಂಬವಾಗಿದೆ.
ಇನ್ನು 2022ರ ಏಪ್ರಿಲ್ 16ರಂದು ವಾಟ್ಸಪ್ ಸ್ಟೇಟಸ್ ವಿಚಾರವಾಗಿ ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಠಾಣೆ ಎದುರು ಬೆಂಗಳೂರಿನ ಕೆಜಿ ಹಳ್ಳಿ ಮಾದರಿಯಲ್ಲಿಯೇ ಗಲಭೆ ನಡೆದಿತ್ತು.
ಈ ಪ್ರಕರಣದಲ್ಲಿ 152 ಮಂದಿಯನ್ನು ಬಂಧಿಸಲಾಗಿದ್ದು, 2 ತಿಂಗಳ ಹಿಂದೆ ಸುಪ್ರೀಂಕೋರ್ಟ್ 31 ಆರೋಪಿಗಳಿಗೆ ಜಾಮೀನು ನೀಡಿತ್ತು.