ಚಿಕ್ಕಮಗಳೂರು : ಹುಲಿ ಉಗುರಿನ ಉರುಳಲ್ಲಿ ಸಿಲುಕಿದ್ದ ಅರಣ್ಯಾಧಿಕಾರಿಯನ್ನ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ದರ್ಶನ್ ರನ್ನು ಅಮಾನತುಗೊಂಡ ಬೆನ್ನಲ್ಲೇ ಅರೆಸ್ಟ್ ಮಾಡಿದ್ದಾರೆ. ಹುಲಿ ಉಗುರು ಧರಿಸಿದ್ದಾರೆ ಎಂದು ದರ್ಶನ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಲಿಖಿತ ದೂರು ನೀಡಲಾಗಿತ್ತು. ವನ್ಯ ಜೀವಿ ಕಾಯ್ದೆಯಲ್ಲಿ ಪ್ರಕರಣ ದಾಖಲಿಸುವಂತೆ ದೂರು ನೀಡಲಾಗಿತ್ತು. ಆದರೆ ತನಿಖೆಗೆ ಹಾಜರಾಗದ ಹಿನ್ನೆಲೆ ಕೊಪ್ಪ ಡಿ.ಎಫ್.ಓ. ನಂದೀಶ್ ಅವರು ಅಮಾನತು ಆದೇಶ ಹೊರಡಿಸಿದ್ದರು. ಇದಾದ ಬಳಿಕ ಕಳಸದ ಡಿ. ಆರ್.ಎಫ್. ಓ. ದರ್ಶನ್ ರನ್ನ ಅರಣ್ಯಾಧಿಕಾರಿ ಗಳು ಅರೆಸ್ಟ್ ಮಾಡಿದ್ದಾರೆ. ದರ್ಶನ್ ಮೇಲೆ ಅರೆನೂರು ಗ್ರಾಮದ ಸುಪ್ರೀತ್, ಅಬ್ದುಲ್ ಎಂಬುವವರಿಂದ ದೂರು ದಾಖಲಾಗಿತ್ತು. ಆಲ್ದೂರು ವಲಯ ಅರಣ್ಯಾಧಿಕಾರಿಗೆ ದೂರು ನೀಡಿದ್ದರು. ಆದರೆ ತನಿಖೆ ನಡೆಸಿ ಕ್ರಮ ಕೈ ಗೊಳ್ಳುವಂತೆ ಲಿಖಿತ ದೂರು ನೀಡಿದ ಹಿನ್ನಲೆ ಮತ್ತು ತನಿಖೆಗೆ ಸಹಕರಿಸದ ಹಿನ್ನೆಲೆ ಡಿ. ಆರ್.ಎಫ್. ಓ. ದರ್ಶನ್ ಅಮಾನತುಗೊಂಡಿದ್ದರು. ಇದರ ಬೆನ್ನಲ್ಲೆ ಜಿಲ್ಲೆ ಎನ್.ಆರ್.ಪುರ ಪಟ್ಟಣದಲ್ಲಿ ಬಾಳೆಹೊನ್ನೂರು ಎಸಿಎಫ್ ಚೇತನ್ ಗಸ್ತಿ ಹಾಗೂ ಕಳಸ ಆರ್ ಎಫ್ ಓ ನಿಶ್ಚಿತ್ ನೇತೃತ್ವದ ತಂಡ ದರ್ಶನ್ ರನ್ನ ಬಂಧಿಸಿದ್ದಾರೆ. ನಂತರ ಕೊಪ್ಪ ಪಟ್ಟಣದ ಡಿಎಫ್ ಓ ನಂದೀಶ್ ಮುಂದೆ ಅರಣ್ಯಾಧಿಕಾರಿಗಳು ಹಾಜರು ಪಡಿಸಿದ್ದಾರೆ. ಇದೀಗ ಹುಲಿ ಹುಗುರಿನ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.