ಕಲಬುರಗಿ: ರಾಜ್ಯದಲ್ಲಿ ಹುಲಿ ಉಗುರಿನ ಪೆಂಡೆಂಟ್ ಸೇರಿದಂತೆ ಇತರೆ ವಸ್ತುಗಳ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ. ಈ ಎಲ್ಲ ಪ್ರಕರಣಗಳಲ್ಲಿ ನೆಲದ ಕಾನೂನು ಬಳಕೆ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ಪ್ರಾಣಿಗಳನ್ನು ಹತ್ಯೆ ಮಾಡಿ ಅವುಗಳ ಹಲ್ಲು, ಚರ್ಮ, ಕೊಂಬು ಹಾಗೂ ಇತರೆ ಅಂಗಗಳ ಬಳಕೆ ಮಾಡಿರುವುದು ಬಯಲಾಗಿ ಶಿಕ್ಷೆಗೆ ಒಳಗಾಗಿರುವುದು ಗೊತ್ತಿರುವ ವಿಚಾರ. ಈಗ ರಾಜ್ಯದಲ್ಲೂ ನಡೆಯುತ್ತಿರುವ ವಿದ್ಯಾಮಾನಗಳಲ್ಲಿ ಹುಲಿ ಉಗುರು ಬಳಕೆ ಮಾಡಿ ಜನರಲ್ಲಿ ಆಕರ್ಷಣೆ ಉಂಟು ಮಡುತ್ತಿರುವ ಹಿನ್ನೆಲೆಯಲ್ಲಿ ಕೆಲವರನ್ನು ಬಂಧಿಸಲಾಗಿದೆ ಎಂದರು.
ಇನ್ನಷ್ಟು ಬಂಧನದ ಸಾಧ್ಯತೆಗಳನ್ನು ಅವರು ನಿರಾಕರಿಸದೆ ನೆಲದ ಕಾನೂನಿನಂತೆ ಕ್ರಮ ಜರುಗುಸಲಾಗುವುದು ಎಂದು ತಿಳಿಸಿದರು..
ಕನ್ನಡ ಚಲನಚಿತ್ರ ನಟ ದರ್ಶನ ಹಾಗೂ ವಿನಯ ಗುರೂಜಿ ಅವರು ಸಾರ್ವಜನಿಕವಾಗಿ ಹುಲಿ ಉಗುರು ತೊಟ್ಟು ಆಕ್ಷೇಪಾರ್ಹವಾಗಿ ನಡೆದು ಕೊಂಡಿದ್ದಾರೆ ಎನ್ನುವ ನಿಟ್ಟಿನಲ್ಲಿ ಕ್ರಮ ಜರುಗಿಸಲು ಅಧಿಕಾರಿಗಳು ಬದ್ಧರಾಗಿದ್ದಾರೆ ಎಂದರು.
ಸಾರ್ವಜನಿಕರು ಈ ನಿಟ್ಟಿನಲ್ಲಿ ದೂರು ನೀಡಿದರೆ, ನೆಲದ ಕಾನೂನಿನ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
ಪ್ರಾಣಿಜನ್ಯ ವಸ್ತು ಗಳ ಬಳಕೆ ಸಂಗ್ರಹ, ಸಾಗಾಟ ಮೊದಲಿನಿಂದಲೂ ನಿಷೇಧ ಮಾಡಲಾಗಿದೆ. ಈ ಅಪರಾಧಕ್ಕೆ ಏಳು ವರ್ಷ ದ ಶಿಕ್ಷೆಯೂ ಇದೆ ಎಂದು ತಿಳಿಸಿದರು.