ಹೃದಯಾಘಾತದಿಂದ ಸಾವನಪ್ಪಿದ ಪಾಕಿಸ್ತಾನದ 17 ವರ್ಷದ ಟೆನಿಸ್ ಆಟಗಾರ್ತಿ….!!

ಇಸ್ಲಾಮಾಬಾದ್ :ಹೃದಯಾಘಾತದಿಂದಾಗಿ ಪಾಕಿಸ್ತಾನದ ಯುವ ಟೆನಿಸ್ ಆಟಗಾರ್ತಿ ಝೈನಾಬ್ ಅಲಿ ನಖ್ವಿ ಸಾವನಪ್ಪಿದ ಘಟನೆ ನಡೆದಿದೆ.

ಮುಂಬರುವ ಐಟಿಎಫ್ ಜೂನಿಯರ್ ಟೂರ್ನಿಯಲ್ಲಿ ಆಡಲು ಸಿದ್ದತೆಯಲ್ಲಿದ್ದ ಅವರು ತಮ್ಮ ಕೋಣೆಯಲ್ಲಿ ಕುಸಿದು ಬಿದ್ದಿದ್ದಾರೆ. ಪ್ರಜ್ಞಾಹೀನರಾದ ಝೈನಾಬ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು. ಝೈನಾಬ್ ಜೊತೆಗೆ ಅವರ ಅಜ್ಜಿ ಕೂಡ ಕೋಣೆಯಲ್ಲಿದ್ದರು.17 ವರ್ಷದ ಆಟಗಾರ್ತಿಗೆ ಹೃದಯಾಘಾತವಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.

‘ಝೈನಾಬ್ ಉದಯೋನ್ಮುಖ ಆಟಗಾರ್ತಿಯಾಗಿದ್ದರು. ವೈದ್ಯರು ಅವರಿಗೆ ಹೃದಯಾಘಾತ ಆಗಿದೆ ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಸಹಜ ಸಾವು ಎಂದು ದಾಖಲಿಸಲಾಗಿದೆ. ಆಟಗಾರ್ತಿಯ ದೇಹದ ಮರಣೋತ್ತರ ಪರೀಕ್ಷೆ ಬೇಡವೆಂದು ಪಾಲಕರೂ ಮನವಿ ಮಾಡಿದ್ದರು. ಆದ್ದರಿಂದ ಕುಟುಂಬದವರಿಗೆ ಆಟಗಾರ್ತಿಯ ಪಾರ್ಥಿವ ಶರೀರವನ್ನು ಹಸ್ತಾಂತರಿಸಲಾಗಿದೆ’ ಎಂದು ಪಾಕಿಸ್ತಾನ ಟೆನಿಸ್ ಫೆಡರೇಷನ್ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement