ಹೃದಾಯಾಘಾತ ಹಾಗೂ ಹಠಾತ್ ಸಾವಿನ ಸಂಖ್ಯೆಲ್ಲಿ ಹೆಚ್ಚಳ

ನವದೆಹಲಿ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಪ್ರಕಾರ ಕೊವೀಡ್ ಕಾಲಘಟ್ಟದ ಬಳಿಕ ಭಾರತದಲ್ಲಿ ಹಠಾತ್ ಸಾವುಗಳ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಇದರೊಂದಿಗೆ 2022 ರಲ್ಲಿ ಮಾತ್ರ ಹೃದಯಾಘಾತ ಪ್ರಕರಣಗಳಲ್ಲಿ 12.5% ​​ಹೆಚ್ಚಳವಾಗಿದೆ.

ಎನ್‌ಸಿಆರ್‌ಬಿ ಹಠಾತ್ ಮರಣವನ್ನು “ಹಿಂಸಾಚಾರವನ್ನು ಹೊರತುಪಡಿಸಿ ಯಾವುದೇ ಕಾರಣದಿಂದ (ಉದಾಹರಣೆಗೆ, ಹೃದಯಾಘಾತ, ಮಿದುಳಿನ ರಕ್ತಸ್ರಾವ, ಇತ್ಯಾದಿ) ತತ್‌ಕ್ಷಣದ ಅಥವಾ ನಿಮಿಷಗಳಲ್ಲಿ ಸಂಭವಿಸುವ ಅನಿರೀಕ್ಷಿತ ಸಾವು” ಎಂದು ವ್ಯಾಖ್ಯಾನಿಸುತ್ತದೆ.ದೇಶಾದ್ಯಂತ ವರದಿಯಾದ “ಹಠಾತ್ ಸಾವುಗಳ” ಸಂಖ್ಯೆಯಲ್ಲಿ 11.6% ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.

2022 ರಲ್ಲಿ ಕನಿಷ್ಠ 56,653 ಹಠಾತ್ ಸಾವುಗಳು ವರದಿಯಾಗಿದ್ದು,ಹೃದಯಾಘಾತದಿಂದ 32,410 ಸಾವುಗಳು ಸಂಭವಿಸಿವೆ. 24,243 ಸಾವುಗಳಿಗೆ ಇತರ ಕಾರಣಗಳಿಂದ ಸಾವಾಗಿದೆ ಎಂದು ವರದಿ ಹೇಳಿದೆ. 45-60 ವರ್ಷ ವಯಸ್ಸಿನವರು ಗರಿಷ್ಠ ಸಂಖ್ಯೆಯಲ್ಲಿ(19,456). ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ.

Advertisement

ಹೃದಯಾಘಾತದ ಸಾವುಗಳ ನಿರ್ದಿಷ್ಟ ವರ್ಗದಲ್ಲಿ ತೀವ್ರ ಏರಿಕೆಯನ್ನು ಕಂಡಿದ್ದು, 2020 ರಲ್ಲಿ 28,579 ರಿಂದ 2021 ರಲ್ಲಿ 28,413 ಕ್ಕೆ ಕಡಿಮೆಯಾಗಿ ನಂತರ 2022 ರಲ್ಲಿ 32,457 ಕ್ಕೆ ಏರಿದೆ ಎಂದು ಹೇಳಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement