ವ್ಯಕ್ತಿಯೊಬ್ಬ ಪತ್ನಿಯನ್ನು ಕೊಂದು, ದೇಹವನ್ನು 200ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿದ ಘಟನೆ ಇಂಗ್ಲೆಂಡ್ನಲ್ಲಿ ನಡೆದಿದೆ.
ಲಿಂಕನ್ ಸೆರಿಮೋನಿಯಲ್ ಕೌಂಟಿಯ 28 ವರ್ಷದ ನಿಕೋಲಸ್ ಮೆಟ್ಸನ್ 26 ವರ್ಷದ ಪತ್ನಿ ಬ್ಲಾಮ್ಲಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪತ್ನಿಯನ್ನು 224 ತುಂಡುಗಳಾಗಿ ಕತ್ತರಿಸಿ, ಚೀಲದಲ್ಲಿ ತುಂಬಿ ಹತ್ತಿರದ ನದಿಗೆ ಎಸೆದಿದ್ದ. ಬಳಿಕ ಪೊಲೀಸರು ಪ್ರಕರಣವನ್ನು ಭೇದಿಸಿದ್ದು, ವ್ಯಕ್ತಿಯನ್ನು ಬಂಧಿಸಿದ್ದಾರೆ.
ಹಂತಕನಿಗೆ ಸೋಮವಾರ ಶಿಕ್ಷೆಯಾಗಲಿದೆ.