ಹೆಚ್ಚಾದ ಬಿಸಿಲಿನ ಬೇಗೆ- ಶ್ವಾನಗಳಿಗೆ ಶೂ ಭಾಗ್ಯ

ಕಲಬುರಗಿ: ಈ ಬಾರಿಯ ಬಿಸಿಲಿನಿಂದಾಗಿ ಜನರು ಹಾಗೂ ಜಾನುವಾರುಗಳು ಪರದಾಡುವಂತಾಗಿದೆ. ಈ ಹಿನ್ನಲೆ ಬಿಸಿಲಿನ ತಾಪದಿಂದ ರಕ್ಷಣೆ ಪಡೆಯಲು ಕಲಬುರಗಿ ಪೊಲೀಸ್ ಶ್ವಾನಗಳಿಗೆ ಶೂ ಹಾಕಲಾಗಿದ್ದು, ಈ ಮೂಲಕ ರಾಜ್ಯದಲ್ಲೇ ಮೊದಲ ಬಾರಿಗೆ ಶ್ವಾನಗಳಿಗೆ ಶೂ ಹಾಕುವ ಪ್ರಯೋಗ ಮಾಡಲಾಗಿದೆ.

ಶ್ವಾನಗಳಿಗೆ ಶೂ ಹಾಕುವುದಷ್ಟೇ ಅಲ್ಲದೆ, ಶ್ವಾನಗಳಿಗೆ ಬಿಸಿಲಿನ ಬೇಗೆಯಿಂದ ರಕ್ಷಿಸಿಕೊಳ್ಳಲು ಏರ್‌ಕೂಲರ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಕಲಬುರಗಿ ಶ್ವಾನದಳದಲ್ಲಿರುವ ರೀಟಾ, ಜಿಮ್ಮಿ, ರಾಣಿ, ರಿಂಕಿ ಎಂಬ ಶ್ವಾನಗಳಿಗೆ ಈ ಶೂ ಭಾಗ್ಯ ದೊರೆತಿದೆ. ಜೊತೆಗೆ ಶ್ವಾನಗಳಿಗೆ ಬಾಯಾರಿಕೆಯಾದರೆ ಸಾಬುದಾಣಿ ಗಂಜಿ, ರಾಗಿ ಗಂಜಿ, ಎಳನೀರನ್ನು ನೀಡಲಾಗುತ್ತಿದೆ.

ಕಲಬುರಗಿ ಜಿಲ್ಲೆಯಲ್ಲಿ ಬಿಸಿಲಿನ ಝಳ ಹೆಚ್ಚಾಗಿದ್ದು, ಲೋಕಸಭೆ ಚುನಾವಣೆ ಹಿನ್ನಲೆ ದಿನಪೂರ್ತಿ ಶ್ವಾನದಳ ಕಾರ್ಯಾಚರಣೆಯಲ್ಲಿ ತೊಡಗಿರಬೇಕಾಗುತ್ತದೆ. ಆದ್ದರಿಂದ ಶ್ವಾನಗಳನ್ನು ಬಿಸಿಲಿನಿಂದ ರಕ್ಷಣೆ ಒದಗಿಸಲು ಈ ನೂತನ ಪ್ರಯೋಗ ಮಾದಲಾಗಿದೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement