ದಾವಣಗೆರೆ: ಆನ್ಲೈನ್ ಮೂಲಕ ಹಣ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭ ಪಡೆಯಬಹುದು ಎಂಬ ಇನ್ಸ್ಟಾಗ್ರಾಂ ಸಂದೇಶಕ್ಕೆ ಉಪನ್ಯಾಸಕರೊಬ್ಬರು ಬರೋಬ್ಬರಿ ₹ 20 ಲಕ್ಷ ಕಳೆದುಕೊಂಡಿದ್ದಾರೆ.!
ನಗರದ ನಿಟ್ಟುವಳ್ಳಿಯ ಹೊಸ ಬಡಾವಣೆಯ ಪಿ.ಸತೀಶ್ ಹಣ ಕಳೆದು ಕೊಂಡ ಉಪನ್ಯಾಸಕ. ಹಂತಹಂತವಾಗಿ 20,10,014 ಪಾವತಿಸಿ ಮೋಸ ಹೋಗಿದ್ದಾರೆ. ಸತೀಶ್ ಅವರು ಇನ್ಸ್ಟಾಗ್ರಾಂ ಖಾತೆ ಪರಿಶೀಲಿಸುತ್ತಿದ್ದಾಗ ಗೋಲ್ಡ್ಮನ್ ಸ್ಯಾಕ್ಸ್ ಬ್ಯುಸಿನೆಸ್ ಸ್ಕೂಲ್ ಎಂಬ ಜಾಹೀರಾತು ಕಣ್ಣಿಗೆ ಬಿದ್ದಿದೆ.
ಆಸಕ್ತಿಯಿಂದ ಲಿಂಕ್ ಕ್ಲಿಕ್ ಮಾಡಿದ ಮರುಕ್ಷಣಕ್ಕೆ, ಆನ್ಲೈನ್ ಮೂಲಕ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗಲಿದೆ ಎಂಬ ಸಂದೇಶ ಬಂದಿದೆ. ಕುತೂಹಲದಿಂದ ನೋಂದಣಿ ಮಾಡಿಕೊಂಡ ಬಳಿಕ ಹಂತ ಹಂತವಾಗಿ ಹಣ ಕಳೆದುಕೊಂಡಿದ್ದಾರೆ.!