ಹೌದು,ಇತ್ತೀಚೆಗಿನ ಬೆಳವಣಿಗೆಗಳು ಬಹಳ ಅಪಾಯಕಾರಿಯಾಗಿದೆ,ಯುವ ಜನರು ಹೆಚ್ಚೆಚ್ಚು ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ,ಆ ಮೂಲಕ ತಮ್ಮ ತಂದೆ ತಾಯಿ ಅಕ್ಕ ತಂಗಿ, ಪತ್ನಿ ಮಕ್ಕಳು ಹೀಗೆ ಎಲ್ಲರನ್ನೂ ಅನಾಥರನ್ನಾಗಿಸಿ ಅವರಿಗೆ ಆಸರೆ ಇಲ್ಲದ ಹಾಗೆ ಮಾಡಿ ಹೋಗುತ್ತಿದ್ದಾರೆ.
ಹೆಚ್ಚಿನ ಆತ್ಮಹತ್ಯೆಗಳನ್ನು ಮಾಡುವವರು ಹೊರಲಾರದ ಸಾಲವನ್ನು ಮೈಮೇಲೆ ಬೇಕು ಬೇಕೂಂತಲೇ ಎಳೆದುಕೊಂಡು ಕೊನೆಗೆ ದಿಕ್ಕು ತೋಚದೆ ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ, ಕೆಲವರಿಗೆ ಸಾಲ ಮಾಡುವುದೆಂದರೆ ಬಹಳ ಖುಷಿ,ಅವನಲ್ಲೂ ಇವನಲ್ಲೂ ಅಲ್ಲಿ ಇಲ್ಲಿ ಬ್ಯಾಂಕ್ ಫೈನಾನ್ಸ್, ಎಲ್ಲೆಲ್ಲಾ ಸಾಲ ಸಿಗುತ್ತದೆ ಅಲ್ಲೆಲ್ಲಾ ಸಾಲ ಮಾಡುವುದು,ಮೋಸ ಮಾಡುವುದು 420 ಬುದ್ದಿಯೇ ಅವರ ಜೀವನದ ಅಂಗ. ಕೆಲವರು ಹಾಸಿಗೆಗಿಂತ ಹೆಚ್ಚೇ ಕಾಲು ಚಾಚುವ ಮಂದಿ ಐಶಾರಾಮಿ ಬದುಕು ಕಟ್ಟಲು,ಶೋಕಿ ಜೀವನಕ್ಕಾಗಿ,ಕೆಟ್ಟ ಗೆಳೆಯರ ಸಂಪರ್ಕ,ಇನ್ನೊಬ್ಬರ ಮುಂದೆ ತಾನು ಸಣ್ಣವನಾಗಬಾರದೆಂಬ ಇಗೋ,ಸಾಧ್ಯವಿಲ್ಲದ ವಹಿವಾಟುಗಳನ್ನು ಮಾಡುವುದು,ಮಾದಕ ವ್ಯಸನ, ಆನ್‌ಲೈನ್ ಗೇಮ್ ಗಳು,ಆನ್‌ಲೈನ್ ಹೂಡಿಕೆಗಳು ಮುಂತಾದ ಮೋಸದ ಬಲೆಯಲ್ಲಿ ಬಿದ್ದು ನರಳಾಡಿ ಮೇಲೇಳಲು ಆಗದೆ ಕೊನೆಗೆ ತನ್ನನ್ನು ಆಶ್ರಯಿಸದವರನ್ನು ನಡು ನೀರಿನಲ್ಲಿ ಬಿಟ್ಟು ತೆರಳುತ್ತಿದ್ದಾರೆ.
ಬುದ್ದಿ ವಾದ ಹೇಳಿ ಸರಿಮಾಡಬೇಕಾದ ಮನೆಯವರು ಕುಟುಂಬಿಕರು ಗೆಳೆಯರ ಬಳಗ ಮರಣದ ನಂತರ ಕಣ್ಣೀರು ಸುರಿಸಿ ಎಷ್ಟು ಬೊಬ್ಬೆ ಹೊಡೆದರೂ ಏನು ಪ್ರಯೋಜನ..? ಬದುಕಿದ್ದಾಗ ಸರಿದಾರಿಗೆ ತರಲು ಹರಸಾಹಸ ಪಟ್ಟಿದ್ದರೆ ಅಮೂಲ್ಯವಾದ ಪ್ರಾಣ ಸುಖಾ ಸುಮ್ಮನೆ ಕಳೆದುಕೊಳ್ಳುವ ಸಾಧ್ಯತೆಯೇ ಇರಲಿಲ್ಲ,ನಮ್ಮ ನಡುವೆ ಈಗಲೂ ಅಂತಹ ಅನೇಕ ಮಂದಿ ಸೊಬಗರು ಇದ್ದಾರೆ ಪತ್ನಿಯ ಎಲ್ಲಾ ಆಭರಣಗಳನ್ನು ಮಾರಿ ,ಮನೆಗೆ ಮಾರಿ ಊರಿಗೆ ಉಪಕಾರಿಯಾದವರು,ಅಂತಹವರನ್ನೆಲ್ಲಾ ಗುರುತಿಸಿ ಬುದ್ದಿ ವಾದ ಹೇಳಿ ಮುಂದೆ ಅವರು ಆತ್ಮಹತ್ಯೆಯಂತಹಾ ಥರ್ಡ್ ಕ್ಲಾಸ್ ಕೆಲಸಕ್ಕೆ ಕೈ ಹಾಕುವ ಮೊದಲು ಎಚ್ಚೆತ್ತುಕೊಳ್ಳೋಣ.