ಏಳರಿಂದ ಎಂಟು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿಗೆ ರಷ್ಯಾದ ಮಹಿಳೆಯರು ಜನ್ಮ ನೀಡಿದ್ರೆ ಅವರಿಗೆ ತಮ್ಮ ಸರ್ಕಾರದಿಂದ ಆರ್ಥಿಕ ಮತ್ತು ಅಗತ್ಯ ಬೆಂಬಲವನ್ನ ನೀಡಲಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಘೋಷಿಸಿದ್ದಾರೆ. ದೇಶದ ಜನಸಂಖ್ಯೆಯನ್ನ ಹೆಚ್ಚಿಸುವ ಉದ್ದೇಶದಿಂದ ಪುಟಿನ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ರಷ್ಯಾ- ಉಕ್ರೇನ್ ಯುದ್ಧದ ಮಧ್ಯೆ ಪುಟಿನ್ ಅವರ ಹೇಳಿಕೆ ಬಂದಿದೆ. ವರದಿಯ ಪ್ರಕಾರ, 140 ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನ ಹೊಂದಿರುವ ರಷ್ಯಾದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಜನನ ದರದಲ್ಲಿ ಇಳಿಕೆ ಕಂಡುಬಂದಿದೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವು ಜನರು ಮಕ್ಕಳನ್ನ ಹೊಂದುವುದನ್ನ ತಡೆಯಲು ಕಾರಣವಾಗಿದೆ ಎಂದು ವರದಿ ಹೇಳಿದೆ.