ಶಿವಮೊಗ್ಗ : ಹೆಚ್.ಡಿ ರೇವಣ್ಣ ಕುಟುಂಬ ಬೇರೆ, ನಮ್ಮ ಕುಟುಂಬ ಬೇರೆ. ನಮ್ಮ ಕುಟುಂಬ ಅಂದ್ರೆ ನಾನು ಮತ್ತು ದೇವೇಗೌಡರು ಅಷ್ಟೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಕುರಿತು ಶಿವಮೊಗ್ಗದಲ್ಲಿ ಮಾತನಾಡಿದ ಹೆಚ್‌ಡಿಕೆ, ರೇವಣ್ಣ ಕುಟುಂಬದಿಂದ ಅಧಿಕೃತವಾಗಿ ಅಂತರ ಕಾಯ್ದುಕೊಂಡಿರೋದನ್ನು ಪ್ರಶ್ತಾಪಿಸಿದ್ದಾರೆ. ಜೊತೆಗೆ ತಪ್ಪು ಮಾಡಿದವರ ಮೇಲೆ ಪಕ್ಷದಿಂದ ಕ್ರಮ ಆಗುತ್ತೆ ಎಂದಿದ್ದಾರೆ. ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧಿಸಿ ಮೂರು ದಿನದಿಂದ ಚರ್ಚೆ ಆಗ್ತಿದೆ. ಎಸ್‌ಐಟಿ ರಚನೆಯಾಗಿದೆ. ಯಾರು ತಪ್ಪು ಮಾಡಿದ್ರು ಅವರು ಕಾನೂನಿಗೆ ತಲೆ ಬಾಗಬೇಕು. ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸಬೇಕು. ಆದರೆ, ಇದರ ನಡುವೆ ಕುಟುಂಬ ಅನ್ನೋದು ತರೋದು ಬೇಡ. ಇದು ವ್ಯಕ್ತಿ ಪ್ರಶ್ನೆ. ಹೀಗಾಗಿ, ವ್ಯಕ್ತಿಯನ್ನ ಪ್ರಶ್ನೆ ಮಾಡಿ. ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸಬೇಕು. ನಾನು ವಹಿಸಿಕೊಳ್ಳುವ ಪ್ರಶ್ನೆ ಯೇ ಇಲ್ಲ. ನನ್ನ ಹೆಸರು, ದೇವೇಗೌಡರ ಹೆಸರು ತರಬೇಡಿ.
ಎಫ್ಐಆರ್ ಹಾಕಿದ್ದಾರೆ. ತನಿಖೆಯಲ್ಲಿ ಸತ್ಯಾಂಶ ಹೊರಬರಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಪ್ರಜ್ವಲ್ ಎಲ್ಲಿದ್ದಾನೆ ಎಂಬ ವಿಚಾರವಾಗಿ ಮಾತನಾಡಿ, ನನ್ನ ಕೇಳಿ ಹೋಗ್ತಾನಾ? ದಿನ ನನ್ನ ಕೇಳಿ ಓಡಾಡುತ್ತಾನಾ? ನನ್ನ ಗಮನಕ್ಕೆ ಬಂದ್ರೆ ಸರಿ ಪಡಿಸಬಹುದಿತ್ತು. ಪಕ್ಷದಿಂದ ಕ್ರಮ ತೆಗೆದುಕೊಳ್ಳುತ್ತೇನೆ. ಎಸ್‌ಐಟಿ ತನಿಖೆ ಸತ್ಯಾಂಶ ಹೊರಬರಲಿ. ಪೆನ್ ಡ್ರೈ ಯಾರು ಬಿಟ್ಟಿದ್ದಾರೆ ಹೊರ ಬರಲಿ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಅಂತಾ ಈಗಾಗಲೇ ಹೇಳಿದ್ದೇನೆ. ಮಹಿಳೆಯರಿಗೆ ದೇವೇಗೌಡರು ಹಾಗೂ ನಾನು ಗೌರವದಿಂದ ನಡೆದುಕೊಂಡಿದ್ದೇನೆ. ಈ ರೀತಿ ಆಗಬಾರದು ಎಂದು ಹೆಚ್‌ಡಿಕೆ ಹೇಳಿದ್ದಾರೆ. ಅವರ ಕುಟುಂಬದ ವಿಚಾರ ವೇ ಬೇರೆ. ಅವರು ನಾಲ್ಕು ಜನ ಬೇರೆ ಇದ್ದಾರೆ. ಮೊದಲೇ ಹೀಗೆ ಹೇಳಿದ್ರೆ ಕ್ರಮ ತೆಗೆದುಕೊಳ್ಳುತ್ತಿದ್ದೆ. ಇವಾಗ ವಿಚಾರ ಹೊರ ಬಂದಿದೆ. ಪ್ರತಿ ಮನುಷ್ಯನಿಗೆ ನಮ್ಮ ಜವಾಬ್ದಾರಿ ಅನ್ನೋದು ಇರಬೇಕು ಎಂದಿದ್ದಾರೆ.