ಸರ್ಕಾರವು ಹೆಣ್ಣುಮಕ್ಕಳಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ರಾಜ್ಯದಲ್ಲಿ ಹೆಣ್ಣುಮಕ್ಕಳ ಅಭಿವೃದ್ಧಿ ಆಗಬೇಕು ಎನ್ನುವ ಕಾರಣಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
ಅಂಥ ಯೋಜನೆಗಳಲ್ಲಿ ಒಂದು ಭಾಗ್ಯಲಕ್ಷ್ಮಿ ಯೋಜನೆ ಆಗಿದೆ. ಈ ಯೋಜನೆಯನ್ನು ನಿಮಗೆ ಹೆಣ್ಣುಮಗು ಹುಟ್ಟಿದ ತಕ್ಷಣವೇ ಮಾಡಿಸಬಹುದು. ಮಗು ಹುಟ್ಟಿದಾಗಲೇ 50 ಸಾವಿರ ರೂಪಾಯಿಯ ಬಾಂಡ್ ಅನ್ನು ನಿಮಗೆ ಕೊಡಲಾಗುತ್ತದೆ. ಹಾಗೆಯೇ ವಿವಿಧ ಹಂತಗಳಲ್ಲಿ ಹೆಣ್ಣುಮಗುವನ್ನು ಬೆಳೆಸಲು ಸಹಾಯ ಕೂಡ ಸರ್ಕಾರದಿಂದಲೇ ಸಿಗುತ್ತದೆ.. ಜನರಲ್ಲಿ ನಡೆಯುವ ಭ್ರೂಣ ಹತ್ಯೆ ತಡೆಯುವುದು ಮತ್ತು ಹೆಣ್ಣುಮಗು ಉತ್ತಮವಾಗಿ ಬೆಳೆಯಬೇಕು ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ.
ಮಗು ಹುಟ್ಟಿದ ಬಳಿಕ ಮಗುವಿಗೆ 50 ಸಾವಿರ ರೂಪಾಯಿಯ ಬಾಂಡ್ ಕೊಡಲಾಗುತ್ತದೆ. ಹೀಗೆ ಪ್ರತಿ ಹೆಣ್ಣು ಮಗುವಿಗೆ 21 ವರ್ಷಗಳು ತುಂಬಿದ ನಂತರದಲ್ಲಿ ಅ ಮಗುವಿಗೆ 2 ಲಕ್ಷ ರೂಪಾಯಿಯನ್ನು ನೀಡಲಾಗುತ್ತದೆ. ಇದರಿಂದ ವಿವಿಧ ಹಂತದಲ್ಲಿ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳ ಬಹುದಾಗಿದೆ. ಮಗುವಿನ ಶಿಕ್ಷಣಕ್ಕೆ ಹಣ ಕೊಡಲಾಗುತ್ತದೆ.
6ನೇ ತರಗತಿಯನ್ನು ಓದುತ್ತಿರುವ ಮಗುವಿಗೆ ಶಾಲೆಗೆ ಸೇರಿಸಲು 3000 ರೂ, ಮತ್ತು 8ನೇ ತರಗತಿ ಮಗುವಿಗೆ 5000, 10ನೇ ತರಗತಿಯನ್ನು ಮಗುವಿಗೆ 7000 ರೂ., 12ನೇ ತರಗತಿ ವಿದ್ಯಾರ್ಥಿನಿಗೆ 8 ಸಾವಿರ. ಒಟ್ಟಾರೆಯಾಗಿ ಶಿಕ್ಷಣಕ್ಕೆ 23,000ರೂ. ಸಿಗುತ್ತದೆ.
ಹೆಣ್ಣು ಮಗುವು ಚೆನ್ನಾಗಿ ಓದಿ ಅಭಿವೃದ್ಧಿಯಾಗಬೇಕು ಹಾಗೂ ಹೆಣ್ಣುಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು. ಹೆಣ್ಣು ಮಗುವು ತಂದೆ ತಾಯಿಗೆ ಹೊರೆ ಆಗಬಾರದು ಎನ್ನುವ ಕಾರಣಕ್ಕೆ ಈ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ.. ಹೆಣ್ಣು ಮಗು ಹುಟ್ಟಿದ ಬಳಿಕ ಆಕೆಗೆ 21 ವರ್ಷ ಆದಾಗ ಈ ಬಾಂಡ್ ಮೆಚ್ಯುರ್ ಆಗುತ್ತದೆ.
ಈ ಯೋಜನೆಗೆ ಯಾರೆಲ್ಲಾ ಅಪ್ಲೈ ಮಾಡಬಹುದು
- ಅರ್ಜಿ ಹಾಕುವವರು ಭಾರತದ ನಾಗರೀಕರೆ ಆಗಿರಬೇಕು.
- ನಿಮ್ಮ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಆಗಿರಬೇಕು.
- ನಿಮ್ಮ ಹೆಣ್ಣುಮಗುವಿಗೆ 18 ವರ್ಷ ಆಗುವುದಕ್ಕಿಂತ ಮೊದಲು ಮದುವೆ ಆಗಬಾರದು.
- ಹೆಣ್ಣುಮಗು ಹುಟ್ಟಿದಾಗ ಅಂಗನವಾಡಿ ಕೇಂದ್ರಕ್ಕೆ ಬಂದು ರಿಜಿಸ್ಟರ್ ಮಾಡಿಸಬೇಕು.
- 2006 ಮಾರ್ಚ್ 31ರ ಬಳಿಕ ಹುಟ್ಟಿರುವ ರಾಜ್ಯಾದ ಎಲ್ಲಾ ಹೆಣ್ಣುಮಕ್ಕಳು ಈ ಯೋಜನೆಯ ಸೌಲಭ್ಯ ಪಡೆಯಬಹುದು.
- ಒಂದು ಫ್ಯಾಮಿಲಿಯಲ್ಲಿ ಇಬ್ಬರು ಹೆಣ್ಣುಮಕ್ಕಳಿಗೆ ಈ ಸೌಲಭ್ಯ ಸಿಗುತ್ತದೆ.
ಭಾಗ್ಯಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಮಗುವಿನ ತಂದೆ ತಾಯಿಯ ಆಧಾರ್ ಕಾರ್ಡ್.
- ಅಡ್ರೆಸ್ ಪ್ರೂಫ್
- ಕ್ಯಾಸ್ಟ್ ಸರ್ಟಿಫಿಕೇಟ್
- ಇನ್ಕಮ್ ಸರ್ಟಿಫಿಕೇಟ್
- ತಂದೆ ತಾಯಿಯ ಪಾಸ್ ಪೋರ್ಟ್ ಸೈಜ್ ಫೋಟೋ.
- ಹೆಣ್ಣುಮಗುವಿನ ಬರ್ತ್ ಸರ್ಟಿಫಿಕೇಟ್
- ಫೋನ್ ನಂಬರ್
- ಬ್ಯಾಂಕ್ ಪಾಸ್ ಬುಕ್ ಕಾಪಿ.