ಮಂಗಳೂರು: ನಟಿ ಸ್ವರಾ ಭಾಸ್ಕರ್ ತಮ್ಮ ಮಗುವಿನ ಆಗಮನದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ತಮ್ಮ ಪ್ರಗ್ನೆನ್ಸಿ ಫೋಟೋಶೂಟ್ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಸೃಷ್ಠಿ ಮಾಡಿದ್ದ ಸ್ವರಾ ಬಾಸ್ಕರ್ ಇದೀಗ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಸ್ವರಾ ಮತ್ತು ಫಹಾದ್ ಅಹ್ಮದ್ ಮಡಿಲಿಗೆ ಹೆಣ್ಣು ಮಗುವಿನ ಆಗಮನವಾಗಿದೆ.
ನಟಿ ಸ್ವರಾ ಭಾಸ್ಕರ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಮಗುವಿನೊಂದಿಗೆ ಕೆಲವು ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳೊಂದಿಗೆ ಈ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಸ್ವರಾ ಅವರು ತಮ್ಮ ಮಗಳಿಗೆ ರಾಬಿಯಾ ಎಂದು ಹೆಸರಿಟ್ಟಿದ್ದಾರೆ, ಸ್ವರಾ ಭಾಸ್ಕರ್ ಕೆಲವು ತಿಂಗಳ ಹಿಂದೆ ಫಹಾದ್ ಅಹ್ಮದ್ ಅವರನ್ನು ಮದುವೆಯಾಗುವ ಮೂಲಕ ಸಾಕಷ್ಟು ಸುದ್ದಿ ಮಾಡಿದ್ದರು.