ಕೋಲ್ಕತ್ತಾ: ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ದೇಶದಲ್ಲೇ ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣ ಮಾಸುವ ಮುನ್ನವೇ ಕೋಲ್ಕತ್ತಾದಲ್ಲಿ ಮತ್ತೊಂದು ಹೀನ ಕೃತ್ಯ ಬೆಳಕಿಗೆ ಬಂದಿದೆ.
ಹೌದು. ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಹೆಸರು ಮುನ್ನೆಲೆಗೆ ಬಂದಿದೆ. ಪ್ರಕರಣ ತೀವ್ರಗೊಳ್ಳುತ್ತಿದ್ದಂತೆಯೇ ಸಂದೀಪ್ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದ. ಈ ನಡುವೆ ಈತನ ಕುಕೃತ್ಯವೊಂದನ್ನು ನೆರೆಹೊರೆಯವರು ಬಯಲು ಮಾಡಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯ ಬರಾಸತ್‌ನ ಮಲ್ಲಿಕ್ ಬಗಾನ್ ಪ್ರದೇಶದಲ್ಲಿ ವಾಸಿಸಲು ಆರಂಭಿಸಿದಾಗಿಂದ ತಮ್ಮ ಮನೆಯಲ್ಲಿ ರೋಗಿಗಳ ಪರೀಕ್ಷೆ ನಡೆಸುವಾಗ ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಿದ್ದರು.
ವಿವಾದಿತ ವೈದ್ಯ ಹಲವು ವರ್ಷಗಳ ಹಿಂದೆ ಖಾಯಂ ಆಗಿ ಕೋಲ್ಕತ್ತಾಗೆ ತೆರಳಿದ್ದ. ಪತ್ನಿಗೆ ಹೆರಿಗೆಯಾದ 14 ದಿನಗಳ ಬಳಿಕ ಸಂದೀಪ್ ಘೋಷ್ ಆಕೆಯ ಹೊಟ್ಟೆಗೆ ಒದ್ದು ಕ್ರೌರ್ಯತೆ ಮೆರೆದಿದ್ದ. ಕಾಲಿನಿಂದ ಒದ್ದ ರಭಸಕ್ಕೆ ಸಿಸೇರಿಯನ್ ಆಗಿದ್ದರಿಂದ ಹೊಟ್ಟೆಗೆ ಹಾಕಿದ್ದ ಸ್ಟಿಚ್ ಕೂಡ ಬಿಚ್ಚಿದೆ. ಪರಿಣಾಮ ಆಕೆ ಜೋರಾಗಿ ಕಿರುಚಿಕೊಂಡಿದ್ದಳು. ಇದನ್ನು ಕೇಳಿಸಿಕೊಂಡ ನೆರೆಹೊರೆಯವರು ಓಡಿ ಬಂದು ಆತನ ಕೈಯಿಂದ ಆಕೆಯನ್ನು ರಕ್ಷಿಸಿದ್ದಾರೆ. ನಂತರ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಆಗ ವೈದ್ಯರು ಹೊಟ್ಟೆಗೆ ಬಲವಾಗಿ ಏಟು ಬಿದ್ದಿದ್ದರಿಂದ ಹಲವಾರು ಹೊಲಿಗೆಗಳು ತೆರೆದಿವೆ ಎಂದು ತಿಳಿಸಿರುವುದಾಗಿ ನೆರೆಹೊರೆಯವರು ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೇ ಘೋಷ್ ಜೊತೆ ಆತನ ತಾಯಿ ಕೂಡ ಪತ್ನಿ ಮತ್ತು ಮಗುವಿನ ಮೇಲೆ ಕ್ರೂರವಾಗಿ ವರ್ತಿಸಿದ್ದಾರೆ. ಮಗು ಜನಿಸಿದ ಸಂದರ್ಭದಲ್ಲಿ ಆಕೆಗೆ ಬಟ್ಟೆಯನ್ನೂ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ. ವರದಿಯ ಪ್ರಕಾರ, ಘೋಷ್ ಅವರ ಪತ್ನಿ ಕೋಲ್ಕತ್ತಾದ ನಿಲ್ ರತನ್ ಸಿರ್ಕಾರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರಾಗಿದ್ದರು.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.