ಚಿಲಿ: ಹೆಲಿಕಾಪ್ಟರ್ ಅಪಘಾತದಲ್ಲಿ ಚಿಲಿ ದೇಶದ ಮಾಜಿ ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ(74) ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಮಂಗಳವಾರ ಮಧ್ಯಾಹ್ನ ದೇಶದ ದಕ್ಷಿಣ ಭಾಗದಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು ಎಂದು ಅವರ ಕಚೇರಿಯ ಹೇಳಿಕೆ ತಿಳಿಸಿದೆ. ಎರಡು ಬಾರಿ ಅಧ್ಯಕ್ಷರಾಗಿ ದೇಶ ಮುನ್ನಡೆಸಿದ್ದ ಸಾಮಾಜಿಕ ಕ್ರಾಂತಿಯ ನಾಯಕನೆಂದೇ ಗುರುತಿಸಿಕೊಂಡಿದ್ದರು
ಅಪಘಾತಕ್ಕೀಡಾದ ಹೆಲಿಕಾಪ್ಟರ್ ನಲ್ಲಿ ನಾಲ್ವರು ಇದ್ದು, ಇತರ ಮೂವರು ಬದುಕುಳಿದಿದ್ದಾರೆ ಎಂದು ಸರ್ಕಾರದ ತುರ್ತು ಸಂಸ್ಥೆ ಸೆನಾಪ್ರೆಡ್ ತಿಳಿಸಿದೆ.
ರಕ್ಷಣಾ ಸೇವೆಗಳು ಪಿನೆರಾ ಅವರ ಮೃತದೇಹವನ್ನು ವಶಪಡಿಸಿಕೊಂಡಿವೆ ಮತ್ತು ಸರ್ಕಾರವು ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಿದೆ ಎಂದು ಚಿಲಿ ಆಂತರಿಕ ಸಚಿವ ಕ್ಯಾರೊಲಿನಾ ತೋಹಾ ಹೇಳಿದ್ದಾರೆ.