ಚಿತ್ರದುರ್ಗ: ಜಿಲ್ಲಾಧಿಕಾರಿಗಳ ನಿರ್ದೇಶನದಂತೆ 2024-25ನೇ ಸಾಲಿನ ಕರ್ನಾಟಕ ಸರ್ಕಾರದ ಬೆಂಬಲಬೆಲೆ ಯೋಜನೆಯಡಿಯಲ್ಲಿ ರೈತರಿಂದ ಹೆಸರು ಕಾಳು ಖರೀದಿ ಮಾಡಲು ಜಿಲ್ಲಾ ಟಾಸ್ಕ್ ಪೋರ್ಸ್ನಲ್ಲಿ ತೀರ್ಮಾನಿಸಲಾಗಿದ್ದು, ಪ್ರೂಟ್ಸ್ ಐಡಿಯೊಂದಿಗೆ ರೈತರು ಬಯೋಮೆಟ್ರಿಕ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಜಿಲ್ಲಾ ವ್ಯವಸ್ಥಾಪಕರು ಕೋರಿದ್ದಾರೆ.
ಬೆಂಬಲಬೆಲೆ ಯೋಜನೆಯಡಿಯಲ್ಲಿ ರೈತರಿಂದ ಹೆಸರು ಕಾಳು ಖರೀದಿ ಮಾಡಲು “ಎನ್‌ಸಿಸಿಎಫ್” ಸಂಸ್ಥೆಯ ಪರವಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ ಚಿತ್ರದುರ್ಗ ಶಾಖೆಯ ಹೊಸದುರ್ಗ ತಾಲ್ಲೂಕಿನಲ್ಲಿ ಪಿಎಸಿಎಸ್ ಹೊಸದುರ್ಗ ರಸ್ತೆ ಮತ್ತು ಪಿಎಸಿಎಸ್ ಶ್ರೀರಾಂಪುರ ಹಾಗೂ ಹಿರಿಯೂರು ತಾಲ್ಲೂಕಿನಲ್ಲಿ ಪಿಎಸಿಎಸ್ ಐಮಂಗಲ ಮತ್ತು ಪಿಎಸಿಎಸ್ ಬಬ್ಬೂರು ಸಹಕಾರ ಸಂಘದಲ್ಲಿ ಹೆಸರು ಕಾಳು ನೋಂದಣಿಗೆ ಅವಕಾಶವಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಸರ್ಕಾರದ ಆದೇಶದಂತೆ ಪ್ರತಿ ರೈತರಿಂದ ಪ್ರತಿ ಎಕರೆಗೆ 2 ಕ್ವಿಂಟಾಲ್‌ನAತೆ ಗರಿಷ್ಟ 10 ಕ್ವಿಂಟಾಲ್ ಹೆಸರು ಕಾಳು ಖರೀದಿ ಮಾಡಲು ಜಿಲ್ಲಾ ಟಾಸ್ಕ್ಪೋರ್ಸ್ನಲ್ಲಿ ತೀರ್ಮಾನಿಸಲಾಗಿದೆ. ಪ್ರೂಟ್ಸ್ ಐಡಿಯೊಂದಿಗೆ ರೈತರು ಬಯೋಮೆಟ್ರಿಕ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಪಿಎಸಿಎಸ್ ಹೊಸದುರ್ಗ ರಸ್ತೆ ಸಹಕಾರ ಸಂಘದ ಕಾರ್ಯದರ್ಶಿ-9008558668, ಪಿಎಸಿಎಸ್ ಶ್ರೀರಾಂಪುರ ಸಹಕಾರ ಸಂಘದ ಕಾರ್ಯದರ್ಶಿ-9844820821, ಪಿಎಸಿಎಸ್ ಐಮಂಗಲ ಸಹಕಾರ ಸಂಘದ ಕಾರ್ಯದರ್ಶಿ-9986182809, ಪಿಎಸಿಎಸ್ ಬಬ್ಬೂರು ಸಹಕಾರ ಸಂಘದ ಕಾರ್ಯದರ್ಶಿ-8088146803 ಗೆ ಸಂಪರ್ಕಿಸುವAತೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಚಿತ್ರದುರ್ಗ ಶಾಖಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.