ಹೇರ್ ಡ್ರೈಯರ್‌ನಿಂದ ಬೆಂಕಿ – ಟೆಕ್ಕಿಯ ಕೂದಲಿನ ಜೊತೆ ಬೆಡ್‌ ಸುಟ್ಟು ಹೋಯ್ತು!

ಹೇರ್‌ ಡ್ರೈಯರ್‌ನಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಪೀಠೋಪಕರಣಗಳು ಬೆಂಕಿಯಿಂದ ಸುಟ್ಟುಹೋದ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮಹಿಳೆಯರ ಪಿಜಿಯಲ್ಲಿ ನಡೆದಿದೆ.

ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿದ್ದ ಶಾಂಭವಿ ಅವರು ಸ್ನಾನ ಮಾಡಿ ಕೆಲಸಕ್ಕೆ ಹೋಗುವ ಆತುರದಲ್ಲಿ ಹೇರ್ ಡ್ರೈಯರ್‌ ಬಳಸಿ ಕೂದಲು ಒಣಗಿಸುತ್ತಿದ್ದರು. ಈ ವೇಳೆ ಶಾರ್ಟ್‌ ಸರ್ಕ್ಯೂಟ್ ಉಂಟಾಗಿ ಹೇರ್‌ ಡ್ರೈಯರ್‌ನಲ್ಲಿ ಬೆಂಕಿ ಕಾಣಿಸಿದೆ. ಕೂದಲು ಸುಡುತ್ತಿದ್ದಂತೆ ಹೇರ್ ಡ್ರೈಯರ್‌ ಅನ್ನು ಶಾಂಭವಿ ಅವರು ಬೆಡ್‌ ಮೇಲೆ ಎಸೆದಿದ್ದಾರೆ. ಬೆಂಕಿಯಿಂದಾಗಿ ಬೆಡ್‌ ಸುಟ್ಟುಹೋಗಿದೆ. ಈಗ ಟೆಕ್ಕಿಯ ನಿರ್ಲಕ್ಷ್ಯದಿಂದ ಪಿಜಿಯ ಪೀಠೋಪಕರಣಕ್ಕೆ ಹಾನಿಯಾಗಿದೆ ಎಂದು ಮಾಲೀಕ ದೂರು ನೀಡಿದ್ದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement