ಹೈದಾರಾಬಾದ್‌ ಥಿಯೇಟರ್‌ಗಳ ಮುಂದೆ ಮಾರ್ಟಿನ್‌ ಕಟೌಟ್ : ಮಾರ್ಟಿನ್‌ಗೆ All The Best ಎಂದ ಸಾಯಿ ಧರಮ್‌ ತೇಜ್‌

WhatsApp
Telegram
Facebook
Twitter
LinkedIn

ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾದ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಚಿತ್ರ ಮಾರ್ಟಿನ್‌ಇಂದು ತೆರೆ ಕಂಡಿದೆ. ಸಿನಿಮಾ ಅನೌನ್ಸ್‌ ಆದಾಗಿನಿಂದ ದೊಡ್ಡ ಮಟ್ಟದ ಕ್ರೇಜ್‌ ಸೃಷ್ಟಿಸಿದ ಚಿತ್ರದ ಟೀಸರ್‌ನ ಸಣ್ಣ ಝಲಕ್‌, ಈ ಸಿನಿಮಾ ಖಂಡಿತ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತದೆ ಎಂಬ ನಿರೀಕ್ಷೆ ಹುಟ್ಟುಹಾಕಿತ್ತು. ಅದರಂತೆ ಸಿನಿಮಾ ಕರ್ನಾಟಕದಲ್ಲಿ ಮಾತ್ರವಲ್ಲ ಹೊರ ರಾಜ್ಯಗಳಲ್ಲಿ ಭಾರೀ ಹವಾ ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ಧ್ರುವ ಸರ್ಜಾ ವೃತ್ತಿ ಜೀವನದಲ್ಲಿ ಅವರ ಸಿನಿಮಾ 13 ಭಾಷೆಗಳಲ್ಲಿ ರಿಲೀಸ್‌ ಆಗುತ್ತಿದೆ. ಟ್ರೈಲರ್‌ ಕೂಡಾ 13 ಭಾಷೆಗಳಲ್ಲಿ ರಿಲೀಸ್‌ ಆಗಿತ್ತು.

ವಿವಿಧ ದೇಶಗಳಿಂದ ಸಿನಿ ಪತ್ರಕರ್ತರು ಸಿನಿಮಾ ಸುದ್ದಿಗೋಷ್ಠಿಗೆ ಹಾಜರಿದ್ದರು. ಟೀಸರ್‌ನಲ್ಲಿದ್ದ ಆಕ್ಷನ್‌ ದೃಶ್ಯಗಳನ್ನು ನೋಡಿಯೇ ಸಿನಿಮಾ ಖಂಡಿತ ನಿರೀಕ್ಷೆ ಮಾಡಿದ್ದಕ್ಕಿಂತಲೂ ಚೆನ್ನಾಗಿದೆ ಎಂಬ ಮಾತು ಕೇಳಿಬಂದಿತ್ತು. ಗುರುವಾರ ಮಧ್ಯರಾತ್ರಿಯಿಂದಲೇ ಎಲ್ಲೆಡೆ ಮಾರ್ಟಿನ್‌ ಅಬ್ಬರ ಶುರುವಾಗಿದೆ. ವಿಶ್ವದಾದ್ಯಂತ ಮಾರ್ಟಿನ್ ಸಿನಿಮಾ 3000 ಸ್ಕ್ರೀನ್‌ಗಳಲ್ಲಿ ತೆರೆಗೆ ಅಪ್ಪಳಿಸುತ್ತಿದೆ. ಕರ್ನಾಟಕ ಮಾತ್ರವಲ್ಲ ನೆರೆ ರಾಜ್ಯ ತೆಲಂಗಾಣದ, ಆಂಧ್ರ ಪ್ರದೇಶದಲ್ಲಿ ಕೂಡಾ ಮಾರ್ಟಿನ್‌, ಜೋರಾಗಿ ಸದ್ದು ಮಾಡುತ್ತಿದ್ದಾನೆ. ಥಿಯೇಟರ್‌ಗಳ ಮುಂದೆ ಧ್ರುವ ಸರ್ಜಾ ಕಟೌಟ್‌ ರಾರಾಜಿಸುತ್ತಿದೆ. ಗುರುವಾರ ರಜನಿಕಾಂತ್‌ ಅಭಿನಯದ ವೇಟ್ಟೈಯನ್‌ ರಿಲೀಸ್‌ ಅಗಿತ್ತು.

ರಜನಿಕಾಂತ್‌ ಕಟೌಟ್‌ ಜೊತೆಗೆ ಹೈದರಾಬಾದ್‌ನಲ್ಲಿ ಧ್ರುವ ಸರ್ಜಾ ಕಟೌಟ್‌ ಕೂಡಾ ನಿಲ್ಲಿಸಲಾಗಿದ್ದು ಅಭಿಮಾನಿಗಳು ಸಿನಿಮಾವನ್ನು ವೆಲ್‌ಕಮ್‌ ಮಾಡಲು ಎದುರು ನೋಡುತ್ತಿದ್ದಾರೆ. ತೆಲುಗು ನಟ ಸಾಯಿ ಧರಮ್‌ ತೇಜ್‌ ಕೂಡಾ ಮಾರ್ಟಿನ್‌ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಧ್ರುವಾ ಸರ್ಜಾ ಎಕ್ಸ್‌ ಖಾತೆಗೂ ತಮ್ಮ ಪೋಸ್ಟ್‌ ಟ್ಯಾಗ್‌ ಮಾಡಿದ್ದಾರೆ. ತೆಲುಗು ಸಿನಿಪ್ರಿಯರು ಕೂಡಾ ಮಾರ್ಟಿನ್‌ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.‌ ಮಾರ್ಟಿನ್‌ ಚಿತ್ರವನ್ನು ವಾಸವಿ ಎಂಟರ್‌ಪ್ರೈಸಸ್‌, ಉದಯ್‌ ಕೆ ಮೆಹ್ತಾ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿ ಉದಯ್‌ ಕೆ ಮೆಹ್ತಾ ನಿರ್ಮಾಣ ಮಾಡಿದ್ದಾರೆ. ಅದ್ದೂರಿ ಖ್ಯಾತಿಯ ಎಪಿ ಅರ್ಜುನ್‌ ಮಾರ್ಟಿನ್‌ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರದ ಹಾಡುಗಳಿಗೆ ಮಣಿ ಶರ್ಮಾ ಸಂಗೀತ ನೀಡಿದರೆ, ರವಿ ಬಸ್ರೂರ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ. 150 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ತಯಾರಾಗಿದೆ.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon